ಉಕ್ರೇನ್ ನಲ್ಲಿ ಮತ್ತೋರ್ವ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಅನಾರೋಗ್ಯದಿಂದ ಬಳಲುತ್ತಿದ್ದ ಪಂಜಾಬ್ ಮೂಲದ ಯುವಕ ಚಂದನ್(22) ಮೃತ ವಿದ್ಯಾರ್ಥಿ.
ವಿನ್ನಿಟ್ಸಿಯಾ ನ್ಯಾಷನಲ್ ಪೈರೋಗೊವ್, ಮೆಮೋರಿಯಲ್ ಮೆಡಿಕಲ್ ಯೂನಿವರ್ಸಿಟಿ, ವಿನ್ನಿಟ್ಸಿಯಾ ಉಕ್ರೇನ್ʼನಲ್ಲಿ ಚಂದನ್ ಅಧ್ಯಯನ ಮಾಡುತ್ತಿದ್ದನು ಎನ್ನಲಾಗಿದೆ.
ಚಂದನ್ ಇದ್ದಕ್ಕಿಂದ್ದಂತೆ ಅನಾರೋಗ್ಯಕ್ಕೆ ಒಳಗಾಗಿದ್ದು, ವಿನ್ನಿಟ್ಸಿಯಾದ ತುರ್ತು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೆದುಳಿನಲ್ಲಿ ಇಸ್ಚೆಮಿಯಾ ಸ್ಟ್ರೋಕ್ʼನಿಂದ ಬಳಲುತ್ತಿದ್ದ ಆತನನ್ನು ಐಸಿಯುಗೆ ಸ್ಥಳಾಂತರಿಸಲಾಯಿತು.
Advertisement. Scroll to continue reading.
ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.