ನವದೆಹಲಿ: ದಿ ಕಾಶ್ಮೀರಿ ಫೈಲ್ಸ್ ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಸಿಆರ್ ಪಿಎಫ್ ಕವರ್ ಪ್ಯಾನ್ ಇಂಡಿಯಾದೊಂದಿಗೆ ‘ವೈ’ ಕ್ಯಾಟಗರಿ ಭದ್ರತೆ ನೀಡಲಾಗಿದೆ ಎಂದು ಗೌವರ್ನಮೆಂಟ್ ಮೂಲಗಳನ್ನು ಉಲ್ಲೇಖಿಸಿ ಎಎನ್ ಐ ವರದಿ ಮಾಡಿದೆ.
ಕಳೆದ ವಾರ ವಿವೇಕದ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ತೆರೆ ಕಂಡಿದೆ. ಈ ಚಿತ್ರ ದೇಶದಾದ್ಯಂತ ಸಂಚಲನ ಸೃಷ್ಟಿಸಿದೆ. ಕಾಶ್ಮೀರದ ಕಥೆ ಹೊಂದಿರುವ ಈ ಚಿತ್ರಕ್ಕೆ ಕರ್ನಾಟಕ ಸೇರಿದಂತೆ ಅನೃಕ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.
ಹೊಸ ಸನ್ಸೇಷನ್ ಮಾಡಿರುವ ಹಿನ್ನಲೆಯಲ್ಲಿಯೇ ನಿರ್ದೇಶಕ ಅಗ್ನಿಹೋತ್ರಿಗೆ ವೈ ಕ್ಯಾಟಗರಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ತಿಳಿದು ಬಂದಿದೆ.
Advertisement. Scroll to continue reading.