ಉಡುಪಿ : ದಕ ಜಿಲ್ಲಾ ಪದ್ಮಶಾಲಿ ಮಹಾಸಭಾ ಮಂಗಳೂರು, ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ ಇವರ ಸಹಭಾಗಿತ್ವದಲ್ಲಿ ಪದ್ಮಶಾಲಿ ಕ್ರೀಡೋತ್ಸವ ಭಾನುವಾರ ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿತು. ಉಭಯ ಜಿಲ್ಲೆಯ 16 ದೇವಸ್ಥಾನದ ವ್ಯಾಪ್ತಿಯ ಸಮಾಜ ಬಾಂಧವರಿಂದ ಬಾಲಕರ ಬಾಲಕಿಯರ ಪುರುಷರ ಮತ್ತು ಮಹಿಳೆಯರ ಉದ್ದ ಜಿಗಿತ, ವಾಲಿಬಾಲ್, ಗುಂಡೆಸತ ಸೇರಿದಂತೆ ನಾನಾ ಸ್ಪರ್ಧೆ ಜರುಗಿತು.
ಇದೇ ಸಂದರ್ಭ ಕ್ರೀಡೋತ್ಸವದ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಸಮಾಜದ ನಾನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಪ್ರತಿಭಾವಂತರನ್ನು ಗೌರವಿಸಲಾಯಿತು, ರಾಷ್ಟ್ರ ಮಟ್ಟದ ಯೋಗ ಚಾಂಪಿಯನ್ ಕುಮಾರಿ ಸನ್ನಿಧಿ ಯಿಂದ ಯೋಗ ಪ್ರದರ್ಶನ ಜರುಗಿತು.
Advertisement. Scroll to continue reading.
ಕ್ರೀಡಾಂಗಣದ ಒಂದು ಭಾಗದಲ್ಲಿ ಕೈ ಮಗ್ಗದಲ್ಲಿ ಬಟ್ಟೆ ಮಾಡುವುದು ನೂಲು ತೆಗೆಯುವುದು , ಇನ್ನೊಂದೆಡೆ ಕೈ ಮಗ್ಗದ ಉತ್ಪನ್ನಗಳ ಮಾರಾಟ , ಉದ್ಯೋಗ ಮಾಹಿತಿ ಕೇಂದ್ರ ವ್ಯವಸ್ಥೆಗೊಳಿಸಲಾಗಿತ್ತು.
ದಕ ಪದ್ಮಶಾಲಿ ಸಮಾಜ ಸೇವಾ ಕೂಟ ಬೆಂಗಳೂರು ಇದರ ಅಧ್ಯಕ್ಷೆ ಬಾನುಮತಿ ಶೆಟ್ಟಿಗಾರ್ ಮಾತನಾಡಿ, ಸಮಾಜ ಧಾರ್ಮಿಕವಾಗಿ ಮುಂದುವರಿದಂತೆ ಸಾಮಾಜಿಕವಾಗಿ ರಾಜಕೀಯವಾಗಿ ಮತ್ತು ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಮುಂದುವರಿಯಲು ಸಾಮೂಹಿಕವಾಗಿ ಶ್ರಮಿಸಬೇಕು. ಸರಕಾರದ ಅನೇಕ ಸೌಲಭ್ಯ ಪಡೆಯಲು ಗುರುಗಳ ಮಠಗಳ ಮತ್ತು ಟ್ರಸ್ಟ್ ಗಳ ಮೂಲಕ ಮಾತ್ರ ಪಡೆಯಲು ಸಾದ್ಯ ಆ ಕುರಿತು ಕೂಡಾ ಸಮಾಜ ಪ್ರಯತ್ನ ಮಾಡಬೇಕಾಗಿದೆ ಎಂದರು.
ಎಂ ಜಯರಾಮ ಮಂಗಳೂರು, ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ್, ರಾಮದಾಸ್ ಶೆಟ್ಟಿಗಾರ್ ಉಡುಪಿ, ಎಚ್. ಏ. ಗೋಪಾಲ್ ವಿಠಲ್ ಶೆಟ್ಟಿಗಾರ್ ಕಾರ್ಕಳ, ಮಾಧವ ಶೆಟ್ಟಿಗಾರ್ ಕೆರೆಕಾಡು , ಲಲಿತಾ ಸತೀಶ್ ಶೆಟ್ಟಿಗಾರ್, ಡಾ ಶಿವಪ್ರಕಾಶ್ ಕೆ., ಧತ್ತರಾಜ್ ಶೆಟ್ಟಿಗಾರ್, ರತ್ನಾಕರ ಇಂದ್ರಾಳಿ, ನರೇಂದ್ರ ಶೆಟ್ಟಿಗಾರ್ ಹೆರ್ಗ, ಸದಾಶಿವ ಗೋಳಿಜೋರ, ಸರೋಜ ಯಶವಂತ ಶೆಟ್ಟಿಗಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.