ಗುಜರಿ ಅಂಗಡಿಯೊಳಗೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಈ ದುರಂತ ಸಂಭವಿಸಿದ್ದು, ಪರಿಣಾಮ ರಜಾಬ್ ಮಜೂರು, ಮ್ಯಾನೇಜರ್ ರಜಾಬ್ ಪಕೀರಣಕಟ್ಟೆ ಸಜೀವ ದಹನವಾಗಿದ್ದಾರೆ. ನಿಯಾಬ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಘಟನೆ ನಡೆದ ತಕ್ಷಣವೇ ಅಗ್ನಿಶಾಮಕದಳವನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಸ್ಥಳೀಯವಾಗಿ ಕಾರ್ಯಾಚರಿಸುವ ಕಚ್ಚಾ ತೈಲ ಸಂಗ್ರಹಗಾರ ಐಎಸ್ ಪಿ ಆರ್ ಎಲ್ ಕಂಪನಿಯಿಂದ ಫೈಯರ್ ಇಂಜಿನ್ ತರಿಸಲಾಗಿದೆ. ಬಳಿಕ ಸಾರ್ವಜನಿಕರ ನೆರವಿನೊಂದಿಗೆ ಅಗ್ನಿಶಾಮಕ ದಳದ ಸಹಾಯ ಪಡೆದು ಹಬ್ಬುತ್ತಿದ್ದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.