ಕರಾವಳಿ

ಕಾಪು : ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ; ಮೂವರು ಸಾವು

1

ಕಾಪು : ಗುಜರಿ ಅಂಗಡಿಗೆ ಬೆಂಕಿ ಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ಮಲ್ಲಾರು ದಾಬ ನಿವಾಸ ಬಳಿ ನಡೆದಿದೆ.

ಗುಜರಿ ಅಂಗಡಿ ಮಾಲಕ ರಜಾಬ್ ಮಜೂರು, ಮ್ಯಾನೇಜರ್ ರಜಾಬ್ ಪಕೀರಣಕಟ್ಟೆ, ನಿಯಾಜ್ ಮೃತಪಟ್ಟವರು. ನಾಲ್ವರು ಗಾಯಗೊಂಡಿದ್ದಾರೆ.

ಗುಜರಿ ಅಂಗಡಿಯೊಳಗೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಈ ದುರಂತ ಸಂಭವಿಸಿದ್ದು, ಪರಿಣಾಮ ರಜಾಬ್ ಮಜೂರು, ಮ್ಯಾನೇಜರ್ ರಜಾಬ್ ಪಕೀರಣಕಟ್ಟೆ ಸಜೀವ ದಹನವಾಗಿದ್ದಾರೆ. ನಿಯಾಬ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಘಟನೆ ನಡೆದ ತಕ್ಷಣವೇ ಅಗ್ನಿಶಾಮಕದಳವನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಸ್ಥಳೀಯವಾಗಿ ಕಾರ್ಯಾಚರಿಸುವ ಕಚ್ಚಾ ತೈಲ ಸಂಗ್ರಹಗಾರ ಐಎಸ್ ಪಿ ಆರ್ ಎಲ್ ಕಂಪನಿಯಿಂದ ಫೈಯರ್ ಇಂಜಿನ್ ತರಿಸಲಾಗಿದೆ. ಬಳಿಕ ಸಾರ್ವಜನಿಕರ ನೆರವಿನೊಂದಿಗೆ ಅಗ್ನಿಶಾಮಕ ದಳದ ಸಹಾಯ ಪಡೆದು ಹಬ್ಬುತ್ತಿದ್ದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com