ತುಮಕೂರು : 25 ವರ್ಷದ ಯುವತಿಯನ್ನು ಮದುವೆಯಾಗಿ ಸುದ್ದಿಯಾಗಿದ್ದ 45 ವರ್ಷದ ಶಂಕರಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಅಕ್ಕಿಮರಿಪಾಳ್ಯದ ನಿವಾಸಿ ಶಂಕರಣ್ಣ 2021ರ ಅಕ್ಟೋಬರ್ನಲ್ಲಿ ಶಂಕರಣ್ಣ 25 ವರ್ಷದ ಯುವತಿಯನ್ನು ವಿವಾಹವಾಗಿದ್ದರು. ನವ ಜೋಡಿಗಳ ವಿವಾಹದ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
45 ವರ್ಷದ ಶಂಕರಣ್ಣ ಮೃತದೇಹ ಅಕ್ಕಿಮರಿಪಾಳ್ಯದ ತೋಟದಲ್ಲಿ ಮಂಗಳವಾರ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹುಲಿಯೂರು ದುರ್ಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
Advertisement. Scroll to continue reading.
ಅಕ್ಟೋಬರ್ನಲ್ಲಿ 25 ವರ್ಷದ ಮೇಘನಾ ಮತ್ತು 45 ವರ್ಷದ ಶಂಕರಣ್ಣ ವಿವಾಹ ನಡೆದಿತ್ತು. ಸ್ವತಃ ಮೇಘನಾ ಶಂಕರಣ್ಣ ಬಳಿ ಹೋಗಿ ವಿವಾಹವಾಗುವಂತೆ ಮನವಿ ಮಾಡಿದ್ದರು. ಇದಕ್ಕೆ ಒಪ್ಪಿದ್ದ ಶಂಕರಣ್ಣ ವಿವಾಹವಾಗಿದ್ದರು.
ಮೇಘನಾಗೆ ಮೊದಲೇ ವಿವಾಹವಾಗಿತ್ತು. ಆಕೆ ಸಂತೆಮಾವತ್ತೂರು ಗ್ರಾಮದ ನಿವಾಸಿಯಾಗಿದ್ದು ಎರಡು ವರ್ಷದಿಂದ ಪತಿ ಕಾಣೆಯಾಗಿದ್ದರು. ಈ ಹಿನ್ನಲೆಯಲ್ಲಿ ಮೇಘನಾ ಶಂಕರಣ್ಣನ ಬಳಿ ಬಂದು ವಿವಾಹವಾಗುವಂತೆ ಮಾನವಿ ಮಾಡಿದ್ದರು. ಬಳಿಕ ಶಂಕರಣ್ಣನ ಜೊತೆ 2ನೇ ವಿವಾಹವಾಗಿದ್ದರು.
ಶಂಕರಣ್ಣ, ಮೇಘನಾ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮದುವೆಯಾದ ಐದೇ ತಿಂಗಳಲ್ಲಿ ಶಂಕರಣ್ಣ ನೇಣಿಗೆ ಶರಣಾಗಿದ್ದಾರೆ.
Advertisement. Scroll to continue reading.