ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ: ಪ್ರಿಯಕರ ಫೋನ್ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬ್ರಹ್ಮಾವರದ ಕಳ್ತೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಮೂಲದ ಕುಸುಮಾ(19) ಆತ್ಮಹತ್ಯೆ ಮಾಡಿಕೊಂಡವಳು.
ಮೂಡಿಗೆರೆ ತಾಲ್ಲೂಕು ಇಡುಕಿಣಿ ಗ್ರಾಮದವಳಾದ ಕುಸುಮಾ ಸುಮಾರು 1 ತಿಂಗಳಿಂದ ಬ್ರಹ್ಮಾವರ ತಾಲ್ಲೂಕು ಕಳ್ತೂರು ಗ್ರಾಮದ ಸಂತೆಕಟ್ಟೆ ಎಂಬಲ್ಲಿರುವ ಮೋಹನ್ ಕಾಮತ್ ಎಂಬುವರ ಮನೆಯಲ್ಲಿ ಹೋಂ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದಳು. ಆಕೆ ಚಿಕ್ಕಮಗಳೂರು ಜಿಲ್ಲೆಯ ರಾಹುಲ್ ಎಂಬುವರನ್ನು ಅತಿಯಾಗಿ ಪ್ರೀತಿ ಮಾಡುತ್ತಿದ್ದು, ಆತನು ಆಕೆಯ ಪೋನ್ ಕರೆಯನ್ನು ಸ್ವೀಕರಿಸದ ಕಾರಣ ಹಾಗೂ ಇನ್ನು ಮುಂದಕ್ಕೆ ಆತನು ತನಗೆ ಸಿಕ್ಕುವುದಿಲ್ಲವೆಂದು ಬೇಸರಗೊಂಡು ಎಪ್ರಿಲ್ 11 ರಂದು ಕಳ್ತೂರು ಸಂತೆಕಟ್ಟೆಯ ಮೋಹನ ಕಾಮತ್ ರವರ ಮನೆಯಲ್ಲಿರುವಾಗ ಇಲಿ ಪಾಷಾಣವನ್ನು ಹಾಲಿನಲ್ಲಿ ಬೆರೆಸಿ ಕುಡಿದಿದ್ದಾಳೆ ಎನ್ನಲಾಗಿದೆ.
Advertisement. Scroll to continue reading.
ಅಸ್ವಸ್ಥಳಾದ ಕುಸುಮಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 17 ರಂದು ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.