ಹೊಸದಿಲ್ಲಿ : ದಿಲ್ಲಿಯ ಜಹಾಂಗೀರ್‌ಪುರಿ ಮತ್ತು ಇತರೆ ಏಳು ರಾಜ್ಯಗಳಲ್ಲಿ ಇತ್ತೀಚೆಗೆ ರಾಮನವಮಿ ಹಾಗೂ ಹನುಮಾನ್ ಜಯಂತಿ ವೇಳೆ ಸಂಭವಿಸಿದ ಕೋಮು ಘರ್ಷಣೆಗಳ ತನಿಖೆಗೆ ನ್ಯಾಯಾಂಗ ಆಯೋಗ ರಚಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಿರಸ್ಕರಿಸಿದೆ.
ವಕೀಲ ವಿಶಾಲ್ ತಿವಾರಿ ಅವರ ಮನವಿಯನ್ನು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿಆರ್ ಗವಾಯ್ ಅವರನ್ನು ಒಳಗೊಂಡ ಪೀಠ ವಜಾಗೊಳಿಸಿದೆ.
ವಕೀಲ ವಿಶಾಲ್ ತಿವಾರಿ ಅವರು ರಾಮನವಮಿ ಸಂದರ್ಭದಲ್ಲಿ ರಾಜಸ್ಥಾನ, ದೆಹಲಿ, ಮಧ್ಯಪ್ರದೇಶ ಮತ್ತು ಗುಜರಾತ್ ಸೇರಿ ಕೆಲವೆಡೆ ನಡೆದ ಘರ್ಷಣೆಗಳ ಬಗ್ಗೆ ತನಿಖೆ ನಡೆಸಲು ಕೋರಿ ಅರ್ಜಿ ಸಲ್ಲಿಸಿದ್ದರು.
Advertisement. Scroll to continue reading.
‘ಮಾಜಿ ಸಿಜೆಐ ನೇತೃತ್ವದಲ್ಲಿ ತನಿಖೆ ನಡೆಯಬೇಕೆಂದು ನೀವು ಬಯಸುತ್ತೀರಾ? ಯಾರಾದರೂ ಮುಕ್ತರಾಗಿದ್ದಾರೆಯೇ? ಕಂಡುಹಿಡಿಯಿರಿ. ಇದು ಯಾವ ರೀತಿಯ ಪರಿಹಾರವಾಗಿದೆ. ನ್ಯಾಯಾಲಯದಿಂದ ನೀಡಲಾಗದ ಅಂತಹ ಪರಿಹಾರಗಳನ್ನು ಕೇಳಬೇಡಿ ಎಂದು ಹೇಳಿದ ಸುಪ್ರೀಂ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.