ನವದೆಹಲಿ: ವೃದ್ಧಿಮಾನ್ ಸಹಾ ಅವರನ್ನು ಬೆದರಿಸಿದ ಆರೋಪದಡಿ ಪತ್ರಕರ್ತ ಬೋರಿಯಾ ಮಜುಂದಾರ್ ಅವರನ್ನು ತಪ್ಪಿತಸ್ಥ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಎರಡು ವರ್ಷಗಳ ಕಾಲ ನಿಷೇಧ ಹೇರಿದೆ.
ಫೆಬ್ರವರಿಯಲ್ಲಿ ಸಂದರ್ಶನ ನೀಡುವುದಕ್ಕೆ ಒಪ್ಪದ ಕಾರಣ ಬೋರಿಯಾ ಮಜುಂದಾರ್ ತಮಗೆ ಭವಿಷ್ಯದಲ್ಲಿ ತೊಂದರೆ ಕೊಡುವ ಅರ್ಥದಲ್ಲಿ ಬೆದರಿಕೆ ಹಾಕಿರುವ ಕೆಲವು ವಾಟ್ಸಪ್ ಸಂದೇಶಗಳನ್ನು ಸಹಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ದೇಶದಲ್ಲಿ ಭಾರಿ ಸದ್ದು ಮಾಡಿ ಬಹುತೇಕ ಮಾಜಿ ಕ್ರಿಕೆಟಿಗರೆಲ್ಲರೂ ಟೀಕಿಸಿದ್ದರು.
ಕೆಲವು ದಿನಗಳ ನಂತರ ಬೋರಿಯಾ ಕೂಡ, ಸಹಾ ಅವರು ನಾನು ಮಾಡಿರುವ ವಾಟ್ಸಪ್ ಸಂದೇಶಗಳನ್ನು ತಿದ್ದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಇದರಿಂದ ವಿವಾದ ಮತ್ತಷ್ಟು ದೊಡ್ಡದಾಗಿತ್ತು. ಈ ಕಾರಣದಿಂದ ಬಿಸಿಸಿಐ ಮಂಡಳಿಯ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಖಜಾಂಚಿ ಅರುಣ್ ಧುಮಾಲ್, ಅಪೆಕ್ಸ್ ಕೌನ್ಸಿಲ್ ಸದಸ್ಯ ಪ್ರಭುತೇಜ್ ಭಾಟಿಯಾ ಅವರುಳ್ಳ ಸಮಿತಿ ನೇಮಿಸಿ ವಿಚಾರಣೆ ನಡೆಸಲು ತಿಳಿಸಿತ್ತು. ಇದೀಗ ಈ ಸಮಿತಿ ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
Advertisement. Scroll to continue reading.