ಕಚ್ಚೂರು ಶ್ರೀನಾಗೇಶ್ವರ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾ ವರ್ಧಂತ್ಯುತ್ಸವ
Published
1
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಸಂವಹನ ಕಲೆ, ಸೌಂದರ್ಯ ಪ್ರಜ್ಞೆ ಭಂಡಾರಿ ಸಮಾಜದವರಿಗೆ ವರದಾನ ಎಂದು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ| ಎಂ. ಮೋಹನ್ ಆಳ್ವ ಹೇಳಿದರು.
ಭಾನುವಾರ ಬಾರ್ಕೂರು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಜರುಗಿದ ವಾರ್ಷಿಕ ಪ್ರತಿಷ್ಠಾ ವರ್ಧಂತ್ಯುತ್ಸವದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರಪಂಚದಲ್ಲಿ ಅತೀ ಹೆಚ್ಚು ಯುವ ಸಂಪತ್ತು ಭಾರತದಲ್ಲಿದೆ ಆದರೆ ಅದು ನಿರುಪಯುಕ್ತವಾಗದಂತೆ ಧರ್ಮ ಮಾರ್ಗದಲ್ಲಿ ನಡೆಯುವಂತೆ ಮಾಡ ಬೇಕಾದುದು ಹಿರೀಯರು ಮಾರ್ಗದರ್ಶನ ಮಾಡಿ ಯುವ ಸಂಪತ್ತು ಸದ್ಭಳಕೆಯಾಗಬೇಕು ಎಂದರು.
Advertisement. Scroll to continue reading.
ಶ್ರೀನಾಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಗುರ್ಮೆ ಫೌಂಡೇಶನ್‍ನ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಬಾರ್ಕೂರು ಗ್ರಾ.ಪಂ. ಅಧ್ಯಕ್ಷ ಬಿ. ಶಾಂತಾರಾಮ ಶೆಟ್ಟಿ, ಭಂಡಾರಿ ಮಹಾಮಂಡಲದ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಅಂತರಾಷ್ಟ್ರೀಯ ಖ್ಯಾತಿಯ ಕೇಶವಿನ್ಯಾಸಗಾರ ಡಾ| ಶಿವರಾಮ ಭಂಡಾರಿ ಮುಂಬಯಿ, ಉದ್ಯಮಿ ಸುರೇಶ್ ಭಂಡಾರಿ ಹಿರೇಬೆಟ್ಟು, ಉಡುಪಿ ನಗರಸಭೆ ಸದಸ್ಯೆ ಸವಿತಾ ಹರೀಶ್‍ರಾಮ್ ಭಂಡಾರಿ ಬನ್ನಂಜೆ, ಉತ್ಸವ ಸಮಿತಿಯ ಅಧ್ಯಕ್ಷ ಅಶೋಕ ಭಂಡಾರಿ ಕುತ್ಪಾಡಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಧಕರನ್ನು ಗೌರವಿಸಲಾಯಿತು.