ಗ್ರೀಸ್ : ಗ್ರೀಸ್ನ ಕಲ್ಲಿಥಿಯಾದಲ್ಲಿ ನಡೆದ 12ನೇ ಅಂತಾರಾಷ್ಟ್ರೀಯ ಜಂಪಿಂಗ್ ಕೂಟದಲ್ಲಿ ಭಾರತದ ಪ್ರಮುಖ ಲಾಂಗ್ ಜಂಪರ್ ಮುರಳಿ ಶ್ರೀಶಂಕರ್ 8.31 ಮೀಟರ್ ದೂರ ಕ್ರಮಿಸಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೀಶಂಕರ್ ನಂತರದ ಸ್ಥಾನದಲ್ಲಿ ಸ್ವೀಡನ್ ಆಟಗಾರ ಥೋಬಿಯಾಸ್ ಮಾಂಟ್ಲರ್ 8.27 ಮೀ ಜಿಗಿತದೊಂದಿಗೆ ಬೆಳ್ಳಿ ಮತ್ತು 10 ಜನರ ಕ್ಷೇತ್ರದಲ್ಲಿ ಫ್ರಾನ್ಸ್ನ ಜೂಲ್ಸ್ ಪೊಮೆರಿ 8.17 ಮೀಟರ್ ನೊಂದಿಗೆ ಕಂಚಿನ ಪದಕ ಪಡೆದರು. ಅಗ್ರ ಮೂರು ಜಿಗಿತಗಾರರು ಮಾತ್ರ 8 ಮೀ-ಅಂಕವನ್ನು ದಾಟಿದರು.
ʻಶ್ರೀಶಂಕರ್ ಸತತವಾಗಿ ದೂರ ಜಿಗಿದಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಕಂಚಿನ ಭಾಗವಾಗಿರುವ ಗ್ರೀಸ್ನ ಕಲ್ಲಿಥಿಯಾ 12 ನೇ ಅಂತರಾಷ್ಟ್ರೀಯ ಜಂಪ್ಸ್ ಮೀಟಿಂಗ್ನಲ್ಲಿ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಚಿನ್ನದ ಪದಕವನನು ತಮ್ಮದಾಗಿಸಿಕೊಂಡಿದ್ದಾರೆʼ ಎಂದು ಮೀಟರ್ಸ್ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಟ್ವೀಟ್ ಮಾಡಿದೆ.
Advertisement. Scroll to continue reading.