ದುಬೈ : ಕುಂದಾಪುರ ಮೂಲದ ಪ್ರವೀಣ್ ಶೆಟ್ಟಿ ವಕ್ವಾಡಿಯವರಿಗೆ 10 ವರ್ಷದ ಗೋಲ್ಡನ್ ವೀಸಾ ನೀಡಿ ಗೌರವಿಸಿದ ಯುಎಇ ಸರ್ಕಾರ
Published
0
ದುಬೈ: ದುಬೈನ ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಒಂದಾದ ಫಾರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ಮಾಲಿಕ ಕುಂದಾಪುರ ಮೂಲದ ವಕ್ವಾಡಿ ಪ್ರವೀಣ್ ಶೆಟ್ಟಿ ಅವರಿಗೆ ಯುಎಇ ಸರ್ಕಾರ ಹತ್ತು ವರ್ಷದ ಗೋಲ್ಡನ್ ವೀಸಾ ನೀಡಿ ಗೌರವಿಸಿದೆ.
ದುಬೈನಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಫಾರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ಎಂಬ ಹೆಸರಿನಲ್ಲಿ ಉದ್ಯಮ ಆರಂಭಿಸಿ ಬಹುದೊಡ್ಡ ಯಶಸ್ಸು ಕಂಡು ಯುಎಇ ಪ್ರವಾಸೋದ್ಯಮದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿರುವ ಪ್ರವೀಣ್ ಶೆಟ್ಟಿಯವರನ್ನು ಗುರುತಿಸಿ ದುಬಾಯಿ ಸರ್ಕಾರ ಈ ಗೌರವ ಪುರಸ್ಕಾರ ನೀಡಿದೆ.
ಫಾರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ಈಗಾಗಲೇ ದುಬೈನಾದ್ಯಂತ ಸುಮಾರು ಏಳು ಹೋಟೆಲ್ ಗಳನ್ನು ಹೊಂದಿದ್ದು, ಇದೀಗ ಹೊಸದಾಗಿ ಆರಂಭವಾದ ಫಾರ್ಚುನ್ ಅಟ್ಟಿಯಮ್ ಹೋಟೆಲ್ ಗೆ ನಿನ್ನೆ ಆಗಮಿಸಿದ ದುಬೈ ಟೂರಿಸಂನ ಜನರಲ್ ಡೈರೆಕ್ಟರ್, ದುಬೈ ಪ್ರವಾಸೋದ್ಯಮಕ್ಕೆ ಮುಖ್ಯ ಕೊಡುಗೆ ನೀಡುತ್ತಿರುವ ಪ್ರವೀಣ್ ಶೆಟ್ಟಿ ವಕ್ವಾಡಿ ಅವರನ್ನು ಗೌರವಿಸಿ ಅಭಿನಂದಿಸಿದರು.