ಉಡುಪಿ : ಪುರಾಣ ಪ್ರಸಿದ್ಧ ದೇವಾಲಯಗಳಲ್ಲೊಂದಾದ ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಿಯ ದೇವಳದ ಬ್ರಹ್ಮಕಲಶೋತ್ಸವ ಪರ್ವವು ಬಹಳ ವಿಜೃಂಭಣೆಯಿಂದ ನ: ಭೂತೋ ನ : ಭವಿಷ್ಯತಿ ಎನ್ನುವಂತೆ ಆಚರಿಸಲ್ಪಡುತ್ತಿದೆ. ಭಕ್ತ ಸಮೂಹದ ದಂಡೇ ಸೇವೆ ಹಾಗೂ ದರ್ಶನಕ್ಕೆ ಬರುತ್ತಿದೆ. 8 ಜೂನ್ 22 ರಂದು ಸಹಸ್ರ ಕಲಶಾಭಿಷೇಕ ನಡೆಯಲಿದ್ದು ಪ್ರತಿ ದಿನ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳು ವಿಧಿ ವತ್ತಾಗಿ ನಡೆಯುತ್ತಿದೆ. ಒಟ್ಟಾರೆ ಶ್ರೀ ದೇವಳ ಭೂಲೋಕದ ಸ್ವರ್ಗದಂತೆ ಅಲಂಕರಿಸಲ್ಪಟ್ಟಿದೆ.
ಈ ಸಂದರ್ಭದಲ್ಲಿ ಉಡುಪಿ ತಾಲ್ಲೂಕಿನ ಬ್ರಾಹ್ಮಣ ಸಭಾ ಕಡಿಯಾಳಿ ವಲಯವು ಶ್ರೀದೇವಳದಲ್ಲಿ ಇದೇ ತಿಂಗಳ 3 ರಿಂದ ನಿರಂತರವಾಗಿ ಒಂಬತ್ತರ ವರೆಗೆ ಪ್ರತೀದಿನ ಮುಂಜಾನೆ 8 ಗಂಟೆಯಿಂದ 8.45ರ ವರೆಗೆ ವಿಷ್ಣು ಸಹಸ್ರನಾಮ, ಕೃಷ್ಣಾಷ್ಟೋತ್ತರ, ವೆಂಕಟೇಶ ಸ್ತೋತ್ರ ಹಾಗೂ ಶ್ರೀ ಸೂಕ್ತಾದಿ ಪಾರಾಯಣ ಕಾರ್ಯಕ್ರಮವನ್ನು ಉಡುಪಿಯ ಸುತ್ತಮುತ್ತಲಿನ ಎಲ್ಲ ಬ್ರಾಹ್ಮಣ ವಲಯಗಳ ವಿಪ್ರಮಹಿಳೆಯರು ಹಾಗೂ ಮಹನೀಯರ ಉಪಸ್ತಿತಿಯಲ್ಲಿ ಅತೀ ಹೆಚ್ಚಿನ ಸಂಖೆಯ ಭಾಗವಹಿಸುವಿಕೆಯೊಂದಿಗೆ ಬಹಳ ಭಕ್ತಿಭಾವದಿಂದ ನಡೆಸುತ್ತ ಮಾತೆ ಮಹಿಷ ಮರ್ದಿನಿಯನ್ನು ಸಮಸ್ತ ಲೋಕಕ್ಕೆ ಹಿತವಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.