ಅಮೆರಿಕ : ಫ್ಲೋರಿಡಾದ ಮೋಟೆಲ್ನಲ್ಲಿ ತಂದೆಯ ಗನ್ ತೆಗೆದುಕೊಂಡು ಎರಡು ಪುಟ್ಟ ಕಂದಮ್ಮಗಳ ಮೇಲೆ 8 ವರ್ಷದ ಬಾಲಕ ಆಟವಾಡುತ್ತಾ ಗುಂಡು ಹಾರಿಸಿರುವ ಘಟನೆ ಬೆಳಕಿಗೆ ಬಂದಿದೆ. ಪರಿಣಾಮ ಒಂದು ವರ್ಷದ ಮಗು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದು, ಎರಡು ವರ್ಷದ ಮಗು ಆಸ್ಪತ್ರೆಯಲ್ಲಿ ಸಾವು – ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಫ್ಲೋರಿಡಾದ ಮೋಟೆಲ್ನಲ್ಲಿ ಭಾನುವಾರ 8 ವರ್ಷದ ಬಾಲಕ ರೂಂನಲ್ಲಿ ತನ್ನ ತಂದೆಯ ಗೆಳತಿಯ ಮಕ್ಕಳಾದ ಒಂದು ವರ್ಷ ಮತ್ತು ಎರಡು ವರ್ಷದ ಹೆಣ್ಮಕ್ಕಳ ಜೊತೆ ಆಟವಾಡುತ್ತಿದ್ದ. ಬಾಲಕನ ತಂದೆ ತನ್ನ ರೂಮ್ ಬಂದೂಕನ್ನು ಇಟ್ಟಿದ್ದರು. ಇದನ್ನು ಗಮನಿಸಿದ ಬಾಲಕ ತಂದೆ ಕೊಠಡಿಯಿಂದ ಹೊರ ಹೋದ ನಂತರ ಗನ್ ಅನ್ನು ಕೈಗೆತ್ತಿಕೊಂಡಿದ್ದಾನೆ. ಪುಟ್ಟ ಕಂದಮ್ಮಗಳ ಜೊತೆ ಆಟವಾಡುತ್ತಿದ್ದವನು ಇದ್ದಕ್ಕಿದ್ದಂತೆ ಗುಂಡು ಹಾರಿಸಿದ್ದಾನೆ
ಪರಿಣಾಮ ಒಂದು ವರ್ಷದ ಹೆಣ್ಣು ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಇನ್ನು ಎರಡು ವರ್ಷದ ಮಗುವಿಗೆ ಗುಂಡು ತಗುಲಿದ ಹಿನ್ನೆಲೆ ಆಸ್ಪತ್ರೆಯಲ್ಲಿ ಸಾವು ಬದುಕಿನೊಂದಿಗೆ ಹೋರಾಡುತ್ತಿದೆ ಎಂದು ತಿಳಿದುಬಂದಿದೆ.
Advertisement. Scroll to continue reading.