ಬ್ರಹ್ಮಾವರ : ಗಾಂಧಿ ಮೈದಾನದ ಬಳಿಯಲ್ಲಿ ಸುಸಜ್ಜಿತವಾದ ಹವಾನಿಯಂತ್ರಿತ ಶೋ ರೂಂನಲ್ಲಿ ಶೇಡ್ಸ್ ಆಮಿಗೋಸ್ ಹೇರ್ ಸ್ಟುಡಿಯೋ ಭಾನುವಾರ ಉದ್ಘಾಟನೆಗೊಂಡಿತು. ತುಳುನಾಡ ಮಾಣಿಕ್ಯ , ರಂಗಕಲಾವಿದ , ಹಾಸ್ಯ ನಟ ಅರವಿಂದ ಬೋಳಾರ ಸಂಸ್ಥೆಯನ್ನು ಉದ್ಟಾಟಿಸಿದರು.
ಬಳಿಕ ಅವರು ಹಾಸ್ಯಭತವಾಗಿ ಮಾತು ಆರಂಭಿಸಿ, ತಲೆಯಲ್ಲಿ ಕೂದಲು ಇರುವವರಿಂದ ಉದ್ಘಾಟನೆ ಮಾಡಿದಲ್ಲಿ ಅವರು ಗ್ರಾಹಕರಾಗುತ್ತಿದ್ದರು. ಆದರೆ ಕೂದಲೆ ಇಲ್ಲದವನಿಂದ ಉದ್ಘಾಟನೆ ಮಾಡಿಸಿದ್ದೀರಿ ಎಂದು ತಾವೇ ಸ್ವತಹ: ಇರುವ ಕೂದಲನ್ನು ಇಲ್ಲಿನ ಕಾರ್ಮಿಕರೀಗೆ ಕತ್ತರಿಯನ್ನು ನೀಡಿ ಸಿಂಗರಿಸಿಕೊಂಡರು.
ಮುಂದುವರಿದು ಮಾತನಾಡಿ, ಇಂದು ಕೇಶ ವಿನ್ಯಾಸಕ್ಕೆ ಮಹತ್ತರ ಸ್ಥಾನ ಇದೆ ಮನುಷ್ಯರ ಅತೀ ಅವಶ್ಯಕತೆಯಲ್ಲಿ ಈ ವೃತ್ತಿ ತುಂಬಾ ಮಹತ್ತರವಾದುದು. ವಿದ್ಯಾವಂತ ಯುವಜನರು ಸರಕಾರಿ ಉದ್ಯೋಗವನ್ನು ನಂಬಿಕುಳಿತುಕೊಳ್ಳದೆ ಅನೇಕ ಸ್ವ ಉದ್ಯೋಗಗಳ ಮೂಲಕ ಗೌರವಾನ್ವಿತ ಬದುಕು ಕಂಡುಕೊಂಡು ಸಾರ್ವಜನಿಕವಾಗಿ ಕೂಡಾ ಗುರುತಿಸಿಕೊಳ್ಳಲು ಸಾಧ್ಯ ಎಂದರು.
ಸಂಸ್ಥೆಯ ಮಾಲಕ ಅಫ್ತಾಭ್ ರಜಾಕ್ ಮತ್ತು ಅಬ್ದುಲ್ ರಜಾಕ್ ಅತಿಥಿಗಳನ್ನು ಸ್ವಾಗತಿಸಿ ಗೌರವಿಸಿದರು. ಬ್ರಹ್ಮಾವರ ಎಸ್ ಎಂ ಎಸ್ ಚರ್ಚ್‍ನ ಧರ್ಮಗುರು ಫಾದರ್ ಲಾರೇನ್ಸ್ ,ಉಪ್ಪಿನಕೋಟೆ ಜಾಮಿಯಾ ಮಸೀದಿಯ ಮೌಲಾನಾ ಇನಾಂ . ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಭುಜಂಗ ಶೆಟ್ಟಿ , ರಮೇಶ್ ಕಾಂಚನ್ , ಯತೀಶ್ ಕರ್ಕೆರಾ ಉಪಸ್ಥಿತರಿದ್ದರು.
ಉಡುಪಿ ಶಾಸಕರಾದ ರಘುಪತಿ ಭಟ್ , ಮಾಜಿ ಸಚಿವ ಪ್ರಮೋದ್ ಮಧ್ವರಾಜ್ , ಬ್ರಹ್ಮಾವರ ಏ. ಎಸ್. ಐ ಶಾಂತರಾಜ್ , ಪ್ರಖ್ಯಾತ್ ಶೆಟ್ಟಿ , ಎಸ್ ನಾರಾಯಣ್ . ದೇವಾನಂದ ನಾಯಕ್ , ನಿತ್ಯಾನಂದ ಬಿ.ಆರ್ ,ರಿಯಾಝ್ ರಫೀಕ್, ತಾಜುದ್ದೀನ್ ಇಬ್ರಾಹಿಂ, ಸಂತೋಷ್ ಶೆಟ್ಟಿ ,ಗುರುರಾಜ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ನೂತನ ಸಂಸ್ಥೆಗೆ ಶುಭಕೋರಿದರು.