ಸೆಪ್ಟೆಂಬರ್ 2ರಂದು ಗಲ್ಫ್ ದೇಶಗಳಲ್ಲಿ ಇ-ಮಣ್ಣು ಚಿತ್ರ ಬಿಡುಗಡೆಗೆ ‘ಓವರ್ಸೀಸ್ ಮೂವೀಸ್ ಗಲ್ಫ್ ತಂಡ’ ಸಜ್ಜು!
Published
0
ಸೆಪ್ಟೆಂಬರ್ 2ರಂದು ಗಲ್ಫ್ ದೇಶಗಳಲ್ಲಿ ಇ-ಮಣ್ಣು ಚಿತ್ರ ಬಿಡುಗಡೆ ಮಾಡುವ ಕುರಿತು ಚಿತ್ರತಂಡ ಹಾಗೂ ಚಿತ್ರ ವಿತರಕರಾದ ಒಎಂಜಿ(ಓವರ್ಸೀಸ್ ಮೂವೀಸ್ ಗಲ್ಫ್) ತಂಡವು ಕನ್ನಡ ಪಾಠ ಶಾಲೆ ದುಬೈ ಇದರ ಆಶ್ರಯದಲ್ಲಿ ಮಾಧ್ಯಮ ಸಂವಾದ ಕಾರ್ಯಕ್ರಮವನ್ನು ದುಬೈ ಫಾರ್ಚ್ಯೂನ್ ಏಟ್ರಿಎಂ ಸಭಾಂಗಣದಲ್ಲಿ ಶನಿವಾರ ನಡೆಸಿ ಪತ್ರಿಕಾ ಪ್ರಕಟಣೆ ನೀಡಿದೆ.
ಮಾಧ್ಯಮ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎನ್ಆರೈ ಫೋರಂ ಅಧ್ಯಕ್ಷ ಪ್ರವೀಣ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ವೇದಿಕೆಯಲ್ಲಿದ್ದರು.
ಇ-ಮಣ್ಣು ಚಿತ್ರದ ಕುರಿತು ನಿರ್ಮಾಪಕರಾದ ಈಶ್ವರ್ ದಾಸ್ ಶೆಟ್ಟಿಯವರು ಇ-ಮಣ್ಣು ಚಿತ್ರ ನಿರ್ಮಾಣ ಹೇಗಾಯಿತು ಎಂದು ವಿವರಿಸಿದರು. ಚಿತ್ರದ ನಿರ್ದೇಶಕ ಶಿವಧ್ವಜ್ ವೀಡಿಯೋ ಸಂದೇಶದ ಮೂಲಕ ಚಿತ್ರ ಬಿಡುಗಡೆಗೆ ಶ್ರಮಿಸುತ್ತಿರುವ ತಂಡಕ್ಕೆ ಶುಭ ಕೋರಿದರು.
Advertisement. Scroll to continue reading.
ಇದೇ ಸಂದರ್ಭದಲ್ಲಿ ಗಲ್ಫ್ ದೇಶಗಳಲ್ಲಿ ಚಲನಚಿತ್ರ ಬಿಡುಗಡೆ, ಪ್ರೀಮಿಯರ್ ಶೋ, ಆಡಿಯೋ ಬಿಡುಗಡೆ, ಚಲನಚಿತ್ರ ಶೂಟಿಂಗ್ ಮಾಡಲು ಅಧಿಕೃತ ಪರವಾನಗಿ ಪಡೆದ ಅನಿವಾಸಿ ಕನ್ನಡಿಗರ ಪ್ರಪ್ರಥಮ ಚಿತ್ರವಿತರಕ ಸಂಸ್ಥೆಯಾದ ‘ಓವರ್ಸೀಸ್ ಮೂವೀಸ್ ಗಲ್ಫ್’ ಗೆ ಅಧಿಕೃತ ಚಾಲನೆ ನೀಡಲಾಯಿತು. ಸೆಂಥಿಲ್ ಬೆಂಗಳೂರು, ಮಲ್ಲಿಕಾರ್ಜುನ ಗೌಡ, ಈಶ್ವರ್ ದಾಸ್ ಶೆಟ್ಟಿ, ಶಶಿಧರ್ ನಾಗರಾಜಪ್ಪ ನೇತೃತ್ವದ ಈ ಸಂಸ್ಥೆಯ ಅಡಿಯಲ್ಲಿ ಇ-ಮಣ್ಣು ಚಿತ್ರ ಬಿಡುಗಡೆಯಾಗಲಿದೆ.
ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ಅಧ್ಯಕ್ಷ ಹಿದಾಯತ್ ಅಡ್ಡೂರ್, ಕನ್ನಡಿಗರು ದುಬೈ ಅಧ್ಯಕ್ಷೆ ಉಮಾ ವಿದ್ಯಾಧರ್, ಶಾರ್ಜಾ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ ಆನಂದ್ ಬೈಲೂರು, ಸುಗಂಧರಾಜ ಬೇಕಲ್, ಗಣೇಶ್ ರೈ, ಚಿತ್ರ ನಿರ್ಮಾಪಕ, ಉದ್ಯಮಿ ಹರೀಶ್ ಶೇರಿಗಾರ್, ಕನ್ನಡ ಪಾಠ ಶಾಲೆಯ ನಾಗರಾಜ್ ರಾವ್, ಗವಾಸ್ಕರ್, ಸಿದ್ಧಲಿಂಗೇಶ್, ಸನ್ನಿ ಕರ್ನಾಟಕ ಮೀಡಿಯಾ ಫೋರಂನ ಇಮ್ರಾನ್ ಎರ್ಮಾಳ್, ಬಿಲ್ಲವಾಸ್ ದುಬೈನ ಸತೀಶ್ ಪೂಜಾರಿ, ಹೆಮ್ಮೆಯ ಕನ್ನಡಿಗರು ದುಬೈನ ಮಮತಾ, ದುಬೈ ಅನಿವಾಸಿ ಕನ್ನಡಿಗರು ತಂಡದ ಫಿರೋಜ್ ಮತ್ತು ಹಲವು ಕನ್ನಡ ಪರ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದು, ಇ-ಮಣ್ಣು ಚಿತ್ರದ ಪ್ರೀಮಿಯರ್ ಶೋ ಯಶಸ್ವಿಗೆ ಶುಭ ಹಾರೈಸಿದರು.
ಇ-ಮಣ್ಣು ಪ್ರೀಮಿಯರ್ ಶೋ ಕುರಿತು ಹೆಚ್ಚಿನ ಮಾಹಿತಿಗಾಗಿ, ಟಿಕೆಟ್ ಬುಕ್ಕಿಂಗ್ ಗಾಗಿ ಸಂಪರ್ಕಿಸಿ: ಸೆಂಥಿಲ್ ಬೆಂಗಳೂರು 050 391 1719