ಶಿವಮೊಗ್ಗದಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್; ಬ್ರಹ್ಮಾವರ ನಿರ್ಮಲ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ದಿಗಂತ್ ಕೋಟ್ಯಾನ್‌ಗೆ ಚಿನ್ನ
Published
1
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಶಿವಮೊಗ್ಗ ನೆಹರೂ ಒಳಕ್ರೀಡಾಂಗಣದಲ್ಲಿ ಇತ್ತೀಚೆಗೆ ಜರುಗಿದ ೩ನೇ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಬ್ರಹ್ಮಾವರ ನಿರ್ಮಲ ಆಂಗ್ಲ ಮಾಧ್ಯಮ ಶಾಲೆಯ ೮ನೇ ತರಗತಿ ವಿದ್ಯಾರ್ಥಿ ದಿಗಂತ್ ಕೋಟ್ಯಾನ್ ೧೪ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಕೆಂಪು ಪಟ್ಟಿಯಲ್ಲಿ ೧ನೇ ಸ್ಥಾನದಲ್ಲಿ ಚಿನ್ನದ ಪದಕ ಪಡೆದಿದ್ದಾನೆ.
ಅಮೇರಿಕಾ, ಶ್ರೀಲಂಕಾ, ನೇಪಾಳ, ಮಲೇಶಿಯಾ ಹಾಗೂ ಭಾರತದ ನಾನಾ ರಾಜ್ಯದಿಂದ ಕರಾಟೆ ಪಟುಗಳು ಆಗಮಿಸಿದ್ದರು.
Advertisement. Scroll to continue reading.
ಈತನು ಕರಾಟೆ ಶಿಕ್ಷಕ ವಾಮನ್ ಪಾಲನ್ ಕರಾಟೆ ಶಿಕ್ಷಣ ಪಡೆದಿದ್ದು ಹಂದಾಡಿ ಗ್ರಾಮದ ಅನುಷಾ ಹಾಗೂ ಉದಯ ಕೋಟ್ಯಾನ್ ಅವರ ಪುತ್ರನಾಗಿದ್ದಾನೆ.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರ ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡ, ಶಿಹಾನ್ ವಿನೋದ್ ಶಿವಮೊಗ್ಗ , ಶಿಹಾನ್ ಎಂ.ಅಲ್ತಾಫ್ ಪಾಷಾ, ಪಿಯರೆ ಎಫ್.ಮೌಲೆ ಶೋಟೋಕಾನ್ , ಹಂಶಿ ಡಬ್ಲ್ಯೂ.ಎ. ಎಸ್.ಪಿ.ಜೆ ಮಡೋಂಜಾ, ಶ್ರೀಲಂಕಾ ರೆಫ್ರಿ ಕೌನ್ಸಿಲ್,ಚಿತ್ರ ನಟ ಸುಮನ್ ತಲ್ವಾರ್ ಉಪಸ್ಥಿತರಿದ್ದರು.