ಮೈಸೂರು : 9 ತಿಂಗಳ ತುಂಬು ಗರ್ಭಿಣಿಯೊಬ್ಬರು ಹಂದಿ ಜ್ವರಕ್ಕೆ ಬಲಿಯಾಗಿರುವ ಘಟನೆ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.
ಹುಣಸೂರು ತಾಲೂಕು ಕೋಣನಹೊಸಹಳ್ಳಿ ಗ್ರಾಮದ ಛಾಯಾ ಮೃತಪಟ್ಟವರು. ಛಾಯಾಗೆ ಈಗಾಗಲೇ 4 ವರ್ಷದ ಗಂಡು ಮಗುವಿದ್ದು, 2ನೇ ಮಗುವಿನ ನಿರೀಕ್ಷೆಯಲ್ಲಿ ಕುಟುಂಬವಿತ್ತು.
ಇನ್ನೂ ಕೆಲವೇ ದಿನದಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ ಛಾಯಾ ಗೆ ಎಚ್1 ಎನ್1 ಸೋಂಕು ತಗುಲಿತ್ತು. ಹೀಗಾಗಿ ಛಾಯಾ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಗುರುವಾರ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
Advertisement. Scroll to continue reading.