ಮುಂಬೈ: ಬಾಲಿವುಡ್ ಅಂಗಳದಲ್ಲಿ ರಾಮಾಯಣ ಚಿತ್ರ ಬರುತ್ತಿರುವುದು ಹಳೇ ವಿಚಾರ. ಆದ್ರೆ, ಈಗ ಹೊಸ ವಿಚಾರ ಹೊರ ಬಿದ್ದಿದೆ. ಹೌದು, ರಾಮಾಯಣ ಚಿತ್ರದಲ್ಲಿ ರಾಂಕಿಂಗ್ ಸ್ಟಾರ್ ಯಶ ನಟಿಸಲಿದ್ದಾರೆ. ಅದೂ ರಾವಣನಾಗಿ.
ಹೌದು, ಭಾರತೀಯ ಪುರಾಣ ಕತೆಯಾದ ರಾಮಾಯಣದಲ್ಲಿ ಸ್ಯಾಂಡಲ್ವುಡ್ ನಟ ಯಶ್ ನಟಿಸಲಿದ್ದಾರೆ. ರಾಮಾಯಣದ ರಾವಣನಾಗಿ ಯಶ್ ಬಣ್ಣ ಹಚ್ಚಲಿದ್ದಾರೆ. ರಾಮಾಯಣದ ಚಿತ್ರೀಕರಣವು 2024ರ ಮೊದಲಲ್ಲಿ ಆರಂಭವಾಗುವ ಸೂಚನೆಯಿದೆ ಎಂದು ಪಿಂಕ್ವಿಲ್ಲಾ ವರದಿ ಮಾಡಿದೆ. ರಾಮಾಯಣದ ಪಾರ್ಟ್ 1ಗೆ ಹದಿನೈದು ದಿನದ ಕಾಲ್ ಶೀಟ್ ಅನ್ನು ಯಶ್ ನೀಡಿದ್ದಾರೆ ಎನ್ನಲಾಗಿದೆ.
ಈ ಸಿನಿಮಾದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ರಾಮನಾಗಿ ರಣಬೀರ್ ಕಪೂರ್ ನಟಿಸಲಿದ್ದಾರೆ. ಸಾಯಿ ಪಲ್ಲವಿ ಸೀತೆಯಾಗಿ ನಟಿಸಲಿದ್ದಾರೆ. ಕನ್ನಡ ನಟ ಯಶ್ ಈ ಸಿನಿಮಾದಲ್ಲಿ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ.
Advertisement. Scroll to continue reading.
ನಿತೇಶ್ ತಿವಾರಿ ಮತ್ತು ತಂಡವು ಫೆಬ್ರವರಿ 2024ರ ಬಳಿಕ ರಾಮಾಯಣದ ಶೂಟಿಂಗ್ ಆರಂಭಿಸುವ ನಿರೀಕ್ಷೆಯಿದೆ. “ವಲ್ಡ್ ಆಫ್ ರಾಮಾಯಣ ಸೃಷ್ಟಿಸಲು ನಿತೇಶ್ ತಿವಾರಿ ಮತ್ತು ತಂಡವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಸಿನಿಮಾದ ಬ್ಲೂಪ್ರಿಂಟ್ ರೆಡಿಯಾಗಿದೆ. ವಿಎಫ್ಎಕ್ಸ್ ಪ್ಲೇಟ್ಗಳನ್ನು ಆಸ್ಕರ್ ವಿನ್ನಿಂಗ್ ಕಂಪನಿಯಾದ ಡಿಎನ್ಇಜಿ ಸಿದ್ಧಪಡಿಸುತ್ತಿದೆ. ಇದು ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂದು ಹೇಳಲಾಗಿದೆ.
ಆದರೆ, ರಾಮಾಯಣ ಎನ್ನುವುದು ಕೇವಲ ವಿಶುಯಲ್ ದೃಶ್ಯವಲ್ಲ. ಸರಳವಾಗಿ ಪ್ರೇಕ್ಷಕರಿಗೆ ಕಥೆ ಹೇಳುವ ಪ್ರಯತ್ನವಾಗಲಿದೆ. ಸಿನಿಮಾದಲ್ಲಿ ಕಥೆಯ ಭಾವನೆಗೆ ಒತ್ತು ನೀಡಲಾಗುತ್ತದೆ” ಎಂದು ಮೂಲಗಳನ್ನು ಉದ್ದೇಶಿಸಿ ಪಿಂಕ್ವಿಲ್ಲಾ ವರದಿ ಮಾಡಿದೆ.
ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಫೆಬ್ರವರಿ ತಿಂಗಳಿನಿಂದ ಶೂಟಿಂಗ್ನಲ್ಲಿ ಪಾಲ್ಗೊಳ್ಳಲಿದ್ದಾರೆ. ಮೊದಲು ರಾಮ ಮತ್ತು ಸೀತೆಯ ಕುರಿತು ಹೆಚ್ಚಿನ ಗಮನ ನೀಡುತ್ತೇವೆ. ಸೀತಾ ಅಪಹರಣದ ಬಳಿಕ ಸಿನಿಮಾ ಮುಂದಿನ ಹಂತಕ್ಕೆ ತೆರೆದುಕೊಳ್ಳಲಿದೆ. ಫೆಬ್ರವರಿಯಿಂದ ಆಗಸ್ಟ್ವರೆಗೆ ಈ ಶೂಟಿಂಗ್ ನಡೆಯಬಹುದು. ರಾವಣನಾಗಿ ಯಶ್ ಶೂಟಿಂಗ್ ಮುಂದಿನ ವರ್ಷ ಜುಲೈ ತಿಂಗಳಲ್ಲಿ ಆರಂಭವಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.
Advertisement. Scroll to continue reading.