ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಇಂದು ನಡೆಯುತ್ತಿರುವ ODI ವಿಶ್ವಕಪ್ ಪಂದ್ಯದಲ್ಲಿ ಅತಿ ವೇಗವಾಗಿ 1000 ರನ್ ಗಳಿಸಿದ ಆಟಗಾರರೆಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಪಂದ್ಯದಲ್ಲಿ 52 ಎಸೆತಗಳಲ್ಲಿ 6 ಬೌಂಡರಿ ಸಹಿತ 41 ರನ್ ಗಳಿಸಿದ ಡೇವಿಡ್ ವಾರ್ನರ್ ತಮ್ಮ ಏಕದಿನ ವಿಶ್ವಕಪ್ ವೃತ್ತಿ ಜೀವನದಲ್ಲಿ ಸಾವಿರ ರನ್ ಗಳನ್ನು ಪೂರೈಸಿದರು.
ಆಸ್ಟ್ರೇಲಿಯಾ ಪರ ವಿಶ್ವಕಪ್ ಟೂರ್ನಿಯಲ್ಲಿ ರಿಕ್ಕಿ ಪಾಂಟಿಂಗ್ 1743 ಕಲೆ ಹಾಕಿ ಅಗ್ರಸ್ಥಾನದಲ್ಲಿದ್ದು, 1085 ರನ್ ಗಳೊಂದಿಗೆ ಆ್ಯಡಂ ಗಿಲ್ ಕ್ರಿಸ್ಟ್ 2ನೇ ಸ್ಥಾನದಲ್ಲಿದ್ದಾರೆ. ಅಂತೆಯೇ 1004ರನ್ ಗಳಿಸಿರುವ ಮಾರ್ಕ್ ವಾ 3ನೇ ಸ್ಥಾನದಲ್ಲಿದ್ದಾರೆ.
Advertisement. Scroll to continue reading.
ಸಚಿನ್ ದಾಖಲೆ ಮುರಿದ ಡೇವಿಡ್ ವಾರ್ನರ್
ಇನ್ನು ಈ ಪಂದ್ಯದಲ್ಲಿ ಸಾವಿರ ರನ್ ಗಳಿಸುವ ಮೂಲಕ ವಾರ್ನರ್ ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನೂ ಹಿಂದಿಕ್ಕಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಕಡಿಮೆ ಇನ್ನಿಂಗ್ಸ್ ನಲ್ಲಿ ಸಾವಿರ ರನ್ ಪೂರೈಸಿದ ದಾಖಲೆ ಇದೀಗ ವಾರ್ನರ್ ಪಾಲಾಗಿದೆ. ಈ ದಾಖಲೆಗಾಗಿ ವಾರ್ನರ್ ಕೇವಲ 19 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದಾರೆ.
ಭಾರತದ ಸಚಿನ್ ತೆಂಡೂಲ್ಕರ್ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ 20 ಇನ್ನಿಂಗ್ಸ್ ಗಳಲ್ಲಿ ಸಾವಿರ ರನ್ ಪೂರೈಸಿ ಈ ಪಟ್ಟಿಯಲ್ಲಿ ಜಂಟಿ 2ನೇ ಸ್ಥಾನದಲ್ಲಿದ್ದಾರೆ. ತಲಾ 21 ಇನ್ನಿಂಗ್ಸ್ ಗಳಲ್ಲಿ ಸಾವಿರ ರನ್ ಪೂರೈಸಿರುವ ವೆಸ್ಟ್ ಇಂಡೀಸ್ ತಂಡದ ವಿವಿಯನ್ ರಿಚರ್ಡ್ಸ್ ಮತ್ತು ಭಾರತದ ಸೌರವ್ ಗಂಗೂಲಿ ಜಂಟಿ 3ನೇ ಸ್ಥಾನದಲ್ಲಿದ್ದಾರೆ.
ODI ವಿಶ್ವಕಪ್‌ನಲ್ಲಿ 1000 ರನ್‌ಗಳಿಗೆ ವೇಗವಾಗಿ ಬ್ಯಾಟ್ಸ್ ಮ್ಯಾನ್ ಗಳು
ಬ್ಯಾಟರ್ ಇನ್ನಿಂಗ್ಸ್ ಡೇವಿಡ್ ವಾರ್ನರ್ 19 ಇನ್ನಿಂಗ್ಸ್
ಸಚಿನ್ ತೆಂಡೂಲ್ಕರ್ 20 ಇನ್ನಿಂಗ್ಸ್
ಎಬಿ ಡಿವಿಲಿಯರ್ಸ್ 20 ಇನ್ನಿಂಗ್ಸ್
ವಿವ್ ರಿಚರ್ಡ್ಸ್ 21 ಇನ್ನಿಂಗ್ಸ್
ಸೌರವ್ ಗಂಗೂಲಿ 21 ಇನ್ನಿಂಗ್ಸ್
Advertisement. Scroll to continue reading.