ಕುಂದಾಪುರ : ನೇಣು ಬಿಗಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಲಾಡಿ ಗ್ರಾಮದಲ್ಲಿ ನಡೆದಿದೆ.
ಮಹಾಬಲ(65) ಆತ್ಮಹತ್ಯೆ ಮಾಡಿಕೊಂಡವರು.
ಸುಮಾರು 1 ವರ್ಷದ ಹಿಂದೆ ಮಹಾಬಲ ಅವರ ಮಗ ಪ್ರಸನ್ನ ಇವರು ತೀರಿಕೊಂಡಿದ್ದರು. ಇದರಿಂದ ಮಹಾಬಲ ಮಾನಸಿಕವಾಗಿ ನೊಂದಿದ್ದು, ಹಾಗೂ ಬೇರೆ ಬೇರೆ ಕಾಯಿಲೆ ಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ವಿಷಯದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement. Scroll to continue reading.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.