ಬ್ರಹ್ಮಾವರ : ಜ್ಞಾನ ವಿಕಾಸ ಯೋಜನೆ ಮಹಿಳೆಯರಿಗೆ ಜ್ಞಾನ ವೃದ್ಧಿ
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಬ್ರಹ್ಮಾವರ ಮಹಿಳಾ ಜ್ಞಾನ ವಿಕಾಸ ಕಾರ್ಯ ಕ್ರಮದಡಿಯಲ್ಲಿ ಬಾರಕೂರು ವಲಯದ ಹನೆಹಳ್ಳಿ ಕಾರ್ಯಕ್ಷೇತ್ರದ ಬಂಡೀಮಠ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಶಾರದಾಂಬೆ ಜ್ಞಾನ ವಿಕಾಸ ಕೇಂದ್ರವನ್ನು ಬ್ರಹ್ಮಾವರ ತಾಲೂಕು ಯೋಜನಾಧಿಕಾರಿ ರಮೇಶ್ ಪಿ ಕೆ ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ, ಎಲ್ಲಾ ವರ್ಗದ, ವಯಸ್ಸಿನ ಮಹಿಳೆಯರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಿಂದ ಮಹಿಳೆಯರು ಸಮಗ್ರ ಯಶಸ್ಸು ಕಾಣಲು ಸಾಧ್ಯ ಎಂದರು.
Advertisement. Scroll to continue reading.
ಮುಖ್ಯ ಅತಿಥಿಗಳಾಗಿ ಪತ್ರಕರ್ತ ಬಂಡೀಮಠ ಶಿವರಾಮ ಆಚಾರ್ಯ, ಅಂಗನವಾಡಿ ಕಾರ್ಯಕರ್ತೆ ಜ್ಯೋತಿ, ಒಕ್ಕೂಟದ ಅಧ್ಯಕ್ಷೆ ಸಂಪಾವತಿ, ಜ್ಯೋತಿ, ತಾಲೂಕು ಸಮನ್ವಯಾಧಿಕಾರಿ ಪುಷ್ಪಲತಾ ಶೆಟ್ಟಿ ವಲಯ ಮೇಲ್ವಿಚಾರಕ ರವೀಂದ್ರ, ಸೇವಾ ಪ್ರತಿನಿಧಿ ವೀಣಾ ಉಪಸ್ಥಿತರಿದ್ದರು.
ಕೇಂದ್ರದ ಸಯೋಜಿಕಿ ಸುಶೀಲ ರವರಿಗೆ ದಾಖಲಾತಿಯನ್ನು ಹಸ್ತಾಂತರಿಸಿದರು. ಗ್ರಾಮೀಣ ಭಾಗದ ಹಲವಾರು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.