ನವದೆಹಲಿ : ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಪ್ರಬಲ ಭೂಕಂಪನ ಸಂಭವಿಸಿದೆ. ದೆಹಲಿ ಮತ್ತು ನೆರೆಯ ಪ್ರದೇಶಗಳನ್ನು ನಡುಗಿಸಿದ ಭಾನುವಾರದ ಭೂಕಂಪದ ಅಂದಾಜು ತೀವ್ರತೆ 3.1 ಆಗಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಹರಿಯಾಣದ ಫರಿದಾಬಾದ್ನಲ್ಲಿ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರ ಬಿಂದು ಫರಿದಾಬಾದ್ನಿಂದ ಪೂರ್ವಕ್ಕೆ ಒಂಬತ್ತು ಕಿಲೋಮೀಟರ್ ಮತ್ತು ದೆಹಲಿಯ ಆಗ್ನೇಯಕ್ಕೆ 30 ಕಿಲೋಮೀಟರ್ ದೂರದಲ್ಲಿತ್ತು.
Advertisement. Scroll to continue reading.