ಹೆಬ್ರಿ : ಕಬ್ಬಿನಾಲೆಯ ಮತ್ತಾವು ಫಾಲ್ಸ್ನಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಂಜಿನಿಯರಿಂಗ್ ವಿದ್ಯಾರ್ಥಿ, ಚಾರ ಹುರ್ತುರ್ಕೆಯ ಪ್ರಸ್ತುತ ಹೆಗ್ಡೆ(21) ಹಾಗೂ ಕರ್ಜೆ ನಿವಾಸಿ ಉಮೇಶ ಕುಮಾರ(45) ಮೃತ ದುರ್ದೈವಿಗಳು.
ಇವರು ಹೆಬ್ರಿ ತಾಲೂಕು ಕಬ್ಬಿನಾಲೆ ಗ್ರಾಮದ ಮತ್ತಾವು ನದಿಯಲ್ಲಿ ಸ್ನಾನ ಮಾಡುವಾಗ ಆಕಸ್ಮಿಕವಾಗಿ ಇಬ್ಬರೂ ಫಾಲ್ಸ್ ನ ನೀರಿನಲ್ಲಿ ಕಾಲು ಜಾರಿ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.