WORLDCUP 2023: ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಆರಂಭಿಕ ಡೇವಿಡ್ ವಾರ್ನರ್, 81 ರನ್ ಬಾರಿಸಿ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯ ವಿಶ್ವಕಪ್ ದಾಖಲೆಯನ್ನು ಮುರಿದಿದ್ದಾರೆ.
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾದ ಪರ ವಾರ್ನರ್, 65 ಎಸೆತಗಳಲ್ಲೇ 4 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 81 ರನ್ ಗಳಿಸಿದರು. ಈ ಮೂಲಕ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ 1400 ರನ್‌ಗಳನ್ನು ಪೂರೈಸಿದರು.
ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ 23 ವಿಶ್ವಕಪ್ ಇನಿಂಗ್ಸ್‌ಗಳಿಂದ 1324 ರನ್ ಗಳಿಸಿದ್ದ ಡೇವಿಡ್ ವಾರ್ನರ್, 81 ರನ್ ಗಳಿಸಿ 1400 ರನ್‌ಗಳ ಗಡಿಯನ್ನು ದಾಟಿದರು. ಈ ಮೂಲಕ ಭಾರತದ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದರು. ಕೊಹ್ಲಿ 31 ಇನಿಂಗ್ಸ್‌ಗಳಿಂದ 1384 ರನ್ ಗಳಿಸಿದ್ದಾರೆ.
Advertisement. Scroll to continue reading.
ವಿಶ್ವಕಪ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಗಳಿಸಿದವರು :
- 2278 ರನ್- ಸಚಿನ್ ತೆಂಡೂಲ್ಕರ್- ಭಾರತ-44 ಇನಿಂಗ್ಸ್
- 1743 ರನ್- ರಿಕಿ ಪಾಂಟಿಂಗ್- ಆಸ್ಟ್ರೇಲಿಯಾ- 42 ಇನಿಂಗ್ಸ್
- 1532 ರನ್- ಕುಮಾರ ಸಂಗಕ್ಕಾರ- ಶ್ರೀಲಂಕಾ- 35 ಇನಿಂಗ್ಸ್
- 1405 ರನ್- ಡೇವಿಡ್ ವಾರ್ನರ್- ಆಸ್ಟ್ರೇಲಿಯಾ- 24 ಇನಿಂಗ್ಸ್
- 1384 ರನ್- ವಿರಾಟ್ ಕೊಹ್ಲಿ- ಭಾರತ-31 ಇನಿಂಗ್ಸ್