ಬೆಂಗಳೂರು: ಅಕ್ಟೋಬರ್ 29 ಕನ್ನಡ ಚಿತ್ರರಂಗದ ಪಾಲಿಗೆ ಕರಾಳ ದಿನ. ಕನ್ನಡಿಗರಿಗೆ ಆಘಾತ ಕೊಟ್ಟ ದಿನ. ಹೌದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದೈಹಿಕವಾಗಿ ದೂರವಾಗಿ ಇಂದಿಗೆ ಎರಡು ವರ್ಷ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಅಪ್ಪು ಸ್ಮರಣೆಯಾಗುತ್ತಿದೆ.
ಪುನೀತ್ ರಾಜ್‌ಕುಮಾರ್ ಅವರ 2ನೇ ವರ್ಷದ ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿನ ಪುನೀತ್ ಅವರ ಸಮಾಧಿ ಬಳಿ ಅವರ ಅಪಾರ ಅಭಿಮಾನಿ ಬಳಗವೇ ನೆರೆದಿದೆ. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ, ಸಮಾಧಿಗೆ ನಮಸ್ಕರಿಸಿ, ನೆಚ್ಚಿನ ನಟನಿಗೆ ನಮಿಸುತ್ತಿದ್ದಾರೆ.
ಡಾ. ರಾಜ್‌ಕುಮಾರ್ ಕುಟುಂಬ ಪುನೀತ್ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಗಳು ಧೃತಿ ಅಪ್ಪ ಪುನೀತ್‌ಗೆ ಇಷ್ಟವಾದ ಸಸ್ಯಾಹಾರದ ಜತೆಗೆ ಮಾಂಸಾಹಾರ ಖಾದ್ಯಗಳನ್ನು ನೈವೇದ್ಯದ ರೂಪದಲ್ಲಿ ಇಟ್ಟು ನಮಸ್ಕರಿಸಿದರು.
Advertisement. Scroll to continue reading.
ರಾಘವೇಂದ್ರ ರಾಜ್‌ಕುಮಾರ್, ಪುತ್ರರಾದ ವಿನಯ್ ರಾಜ್‌ಕುಮಾರ್, ಯುವ ರಾಜ್‌ಕುಮಾರ್, ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಮಕ್ಕಳಾದ ವಂದಿತಾ ಮತ್ತು ಧೃತಿ ಅಪ್ಪನ ಎರಡನೇ ವರ್ಷದ ಪುಣ್ಯ ಸ್ಮರಣೆಯಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿದರು.
ಉಚಿತ ಬಿರಿಯಾನಿ ವಿತರಣೆ :
ಅಪ್ಪು ಸ್ಮರಣೆಗೆ ಉಚಿತ ಬಿರಿಯಾನಿ ವಿತರಣೆ ಪುನೀತ್ ನಮ್ಮನ್ನಾಗಲಿ ಎರಡು ವರ್ಷ ಕಳೆದರು ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿದ್ದಾರೆ. ಪುನೀತ್ ರಾಜಕುಮಾರ್ ರವರ 2 ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಅಭಿಮಾನಿಗಳಿಗೆ ಉಚಿತ ಬಿರಿಯಾನಿ ವಿತರಣೆ ಮಾಡಲಾಗುತ್ತಿದೆ. ಕೋಡಂಬಳ್ಳಿ ಗ್ರಾಮದಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ ಉಚಿತ ಬಿರಿಯಾನಿ ವಿತರಣೆ ನಡೆದಿದೆ.
Advertisement. Scroll to continue reading.