ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆಟಗಾರರ ಹರಾಜು ಡಿಸೆಂಬರ್ 19, 2023 ರಂದು ದುಬೈನಲ್ಲಿ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೇ, ಫ್ರಾಂಚೈಸಿ ಆಟಗಾರರನ್ನ ಉಳಿಸಿಕೊಳ್ಳುವ ಪಟ್ಟಿಯನ್ನು ಪ್ರಕಟಿಸಲು ಬಿಸಿಸಿಐ ನವೆಂಬರ್ 26ರ ಗಡುವನ್ನು ನಿಗದಿಪಡಿಸಿದೆ ಎಂದು ತಿಳಿದುಬಂದಿದೆ. ಆದರೆ, ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆಟಗಾರರನ್ನು ಖರೀದಿಸಲು ತಂಡಗಳು 5 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಬಿಡ್ ಮಾಡಬಹುದು ಎನ್ನಲಾಗಿದೆ.
ಅತಿ ಹೆಚ್ಚು ಹಣ ಹೊಂದಿದೆ ಪಂಜಾಬ್ ಕಿಂಗ್ಸ್ :
Advertisement. Scroll to continue reading.
ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ 5ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಮುಂದಿನ ಆವೃತ್ತಿಗಾಗಿ ತಮ್ಮ ಲೈನ್‌ಅಪ್ ಅನ್ನು ನಿರ್ಮಿಸಲು ಪ್ರತಿ ತಂಡವು 100 ಕೋಟಿ ರೂ.ಗಳನ್ನ (ಸುಮಾರು 12.02 ಮಿಲಿಯನ್ ಯುಎಸ್ಡಿ) ಹೊಂದಿದೆ, ಇದು ಹಿಂದಿನ ಋತುವಿನ 95 ಕೋಟಿ ಪರ್ಸ್ಗಿಂತ 5 ಕೋಟಿ ಹೆಚ್ಚಾಗಿದೆ. ಪಂಜಾಬ್ ಕಿಂಗ್ಸ್ 12.20 ಕೋಟಿ ರೂ.ಗಳೊಂದಿಗೆ ಅತಿ ಹೆಚ್ಚು ಖರ್ಚು ಮಾಡಿದರೆ, ಮುಂಬೈ ಇಂಡಿಯನ್ಸ್ 0.05 ಕೋಟಿ ರೂ.ಗಳೊಂದಿಗೆ ಅತ್ಯಂತ ಕಡಿಮೆ ಮೊತ್ತವನ್ನ ಹೊಂದಿದೆ.
ಉಳಿದ ಫ್ರಾಂಚೈಸಿಗಳಲ್ಲಿ ಸನ್ರೈಸರ್ಸ್ ಹೈದರಾಬಾದ್ 6.55 ಕೋಟಿ ರೂ.ಗಳನ್ನ (0.79 ಮಿಲಿಯನ್ ಡಾಲರ್) ಹೊಂದಿದೆ. ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಲಾ 4.45 ಕೋಟಿ ರೂ. ಲಕ್ನೋ ಸೂಪರ್ ಜೈಂಟ್ಸ್ 3.55 ಕೋಟಿ ರೂ.(0.43 ಮಿಲಿಯನ್ ಡಾಲರ್) ಹೊಂದಿದೆ. ರಾಜಸ್ಥಾನ್ ರಾಯಲ್ಸ್ ಬಳಿ 3.35 ಕೋಟಿ ಡಾಲರ್ (0.40 ಮಿಲಿಯನ್ ಡಾಲರ್) ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 1.75 ಕೋಟಿ ರೂಪಾಯಿ (0.21 ಮಿಲಿಯನ್ ಡಾಲರ್) ಹೊಂದಿದೆ. ಕೋಲ್ಕತಾ ನೈಟ್ ರೈಡರ್ಸ್ ಬಳಿ 1.65 ಕೋಟಿ ರೂಪಾಯಿ (0.2 ಮಿಲಿಯನ್ ಡಾಲರ್) ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ 1.5 ಕೋಟಿ ರೂಪಾಯಿ (0.18 ಮಿಲಿಯನ್ ಡಾಲರ್) ಹೊಂದಿದೆ.
Advertisement. Scroll to continue reading.
ಈ ನಡುವೆ, ಲಕ್ನೋ ಸೂಪರ್ ಜೈಂಟ್ಸ್ ರೊಮಾರಿಯೊ ಶೆಫರ್ಡ್ ಅವರನ್ನ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಮಾರಾಟ ಮಾಡಿದೆ ಎಂದು ಶುಕ್ರವಾರ ತಿಳಿದುಬಂದಿದೆ. ಕೇವಲ 4 ಐಪಿಎಲ್ ಪಂದ್ಯಗಳನ್ನು ಆಡಿರುವ ವೆಸ್ಟ್ ಇಂಡೀಸ್ ಆಲ್ರೌಂಡರ್ ಮುಂಬೈ ಇಂಡಿಯನ್ಸ್ ಗೆ 50 ಲಕ್ಷ ರೂ.ಗೆ ಹರಾಜಾಗಿದ್ದಾರೆ.
ಶೆಫರ್ಡ್ ಒಟ್ಟಾರೆ 31 ಟಿ 20 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ, 37.6ರ ಯೋಗ್ಯ ಸರಾಸರಿಯಲ್ಲಿ 301 ರನ್ ಗಳಿಸಿದ್ದಾರೆ. 28ರ ಹರೆಯದ ವೇಗಿ ತಮ್ಮ ಟಿ20ಐ ವೃತ್ತಿಜೀವನದಲ್ಲಿ 31 ವಿಕೆಟ್ಗಳನ್ನು ಪಡೆದಿದ್ದಾರೆ, 10.38 ಎಕಾನಮಿ ರೇಟ್ ಹೊಂದಿದ್ದು, 4/31 ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳನ್ನ ಹೊಂದಿದ್ದಾರೆ.
Advertisement. Scroll to continue reading.