ಅರೆ ಹೌದಾ!

ನೊಬೆಲ್ ಪ್ರಶಸ್ತಿ ವಿಜೇತ ಭಾರತೀಯ ಸಾಧಕನ ಹೆಸರನ್ನು ಮಗನಿಗಿಟ್ಟಿದ್ದಾರೆ ಮಸ್ಕ್!

1

ಲಂಡನ್: ‘ಎಕ್ಸ್’ ಮಾಲಕ ಎಲೋನ್ ಮಸ್ಕ್ ತಮ್ಮ ಮಗನಿಗೆ ಹೆಸರಾಂತ ಭಾರತೀಯ ನೊಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರಜ್ಞ ಪ್ರೊಫೆಸರ್ ಎಸ್ ಚಂದ್ರಶೇಖರ್ ಅವರ ಹೆಸರನ್ನು ಇಡಲಾಗಿದೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಬ್ರಿಟನ್‌ನಲ್ಲಿ ನಡೆದ ಗ್ಲೋಬಲ್ ಎಐ ಶೃಂಗಸಭೆಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಈ ವಿಷಯ ಬಹಿರಂಗವಾಗಿದೆ.

ಮಸ್ಕ್ ಚಂದ್ರಶೇಖರ್ ಅವರ ಹೆಸರು ಕೇಳಿದಾಗ ತಮ್ಮ ಪುತ್ರನ ಹೆಸರಲ್ಲೂ ಚಂದ್ರಶೇಖರ್ ಇರುವುದಾಗಿ ತಿಳಿಸಿದ್ದಾರೆ. ಮಸ್ಕ್‌ನೊಂದಿಗಿನ ಭೇಟಿಯ ಫೋಟೋವನ್ನು ಎಕ್ಸ್‌ನಲ್ಲಿ ಚಂದ್ರಶೇಖರ್ ಹಂಚಿಕೊಂಡಿದ್ದು, ತಮ್ಮ ಮಗನಿಗೆ ಭಾರತೀಯ ವಿಜ್ಞಾನಿಯ ಹೆಸರನ್ನು ಇಟ್ಟಿರುವುದನ್ನು ಬಹಿರಂಗಪಡಿಸಿದ್ದಾಗಿ ಹೇಳಿದ್ದಾರೆ.

Advertisement. Scroll to continue reading.

ಈ ಬಗ್ಗೆ ಬರೆದಿರುವ ಅವರು, ಎಲೋನ್ ಮಸ್ಕ್ ಮತ್ತು ಶಿವೋನ್ ಜಿಲಿಸ್ ಅವರ ಪುತ್ರನಿಗೆ ‘ಚಂದ್ರಶೇಖರ್’ ಎಂಬ ಮಧ್ಯದ ಹೆಸರನ್ನು ಇಟ್ಟಿರುವುದನ್ನು ಹಂಚಿಕೊಂಡಿದ್ದಾರೆ. ಈ ವಿಶಿಷ್ಟ ಹೆಸರು 1983 ರಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಹೆಸರಾಂತ ನೊಬೆಲ್ ಭೌತಶಾಸ್ತ್ರಜ್ಞ ಪ್ರೊಫೆಸರ್ ಎಸ್ ಚಂದ್ರಶೇಖರ್ ಅವರಿಗೆ ಗೌರವವಾಗಿದೆ. ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ಪರಿಣತಿ ಹೊಂದಿರುವ ಕೆನಡಾದ ಶಿವನ್ ಆಲಿಸ್ ಜಿಲಿಸ್ ಈ ಮಗುವಿನ ತಾಯಿಯಾಗಿದ್ದಾರೆ ಎಂದು ಮಾಹಿತಿ ನೀಡಿದರೆ.

ಚಂದ್ರಶೇಖರ್ ಅವರು ಬಹಿರಂಗಪಡಿಸಿದ ಈ ವಿಚಾರವನ್ನು ದೃಢಪಡಿಸಿದ ಜಿಲಿಸ್, ಹೌದು, ಇದು ನಿಜ. ನಾವು ಮಗನನ್ನು ಚಿಕ್ಕದಾಗಿ ಶೇಖರ್ ಎಂದು ಕರೆಯುತ್ತೇವೆ. ಆದರೆ ನಮ್ಮ ಮಗನಿಗೆ ಈ ಹೆಸರನ್ನು ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರಿಗೆ ಗೌರವಾರ್ಥವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com