ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ನ್ಯೂಜಿಲೆಂಡ್‌ನ ಯುವ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ ಅಮೋಘ ಶತಕ ಗಳಿಸಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ರಚಿನ್ ಇತಿಹಾಸ ಬರೆದಿದ್ದಾರೆ 94 ಎಸೆತಗಳಲ್ಲಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 108 ರನ್ ಗಳಿಸಿ ಸಚಿನ್ ದಾಖಲೆ ಮುರಿದಿದ್ದಾರೆ.
ಸಚಿನ್ ದಾಖಲೆ ಮುರಿದ ರಚಿನ್ :
Advertisement. Scroll to continue reading.
ಏಕದಿನ ವಿಶ್ವಕಪ್‌ನಲ್ಲಿ 25 ವರ್ಷಕ್ಕೂ ಹಿಂದೆ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ರಚಿನ್ ಮುರಿದಿದ್ದಾರೆ.
23 ವರ್ಷದ ರಚಿನ್ ಇದು ಏಕದಿನ ವಿಶ್ವಕಪ್‌ನಲ್ಲಿ ಗಳಿಸಿದ ಮೂರನೇ ಶತಕವಾಗಿದ್ದು, ಚೊಚ್ಚಲ ವಿಶ್ವಕಪ್ ಆಡುತ್ತಿರುವ ರಚನ್ ಈಗಾಗಲೇ ಮೂರು ಶತಕಗಳನ್ನು ಗಳಿಸಿದ್ದಾರೆ.
ಮತ್ತೊಂದೆಡೆ 25 ವರ್ಷಕ್ಕೂ ಮುನ್ನ ಸಚಿನ್ ಎರಡು ಶತಕಗಳನ್ನು ಗಳಿಸಿದ್ದರು.
ಬೆಂಗಳೂರಿನ ನಂಟು :
Advertisement. Scroll to continue reading.
ರಚಿನ್ ಅವರು ಹುಟ್ಟಿ ಬೆಳೆದದ್ದು ನ್ಯೂಜಿಲೆಂಡ್‌ನಲ್ಲಾದರೂ, ಅವರಿಗೆ ಬೆಂಗಳೂರಿನ ಜತೆ ನಂಟು ಇದೆ. ಅದು ಹೇಗೆಂದರೆ, ಅವರ ತಂದೆ, ರವೀಂದ್ರ ಬೆಂಗಳೂರಿನವರು. ಹೆತ್ತವರ ಜತೆ ರಚಿನ್ ಹಲವು ಸಲ ಬೆಂಗಳೂರಿಗೆ ಬಂದಿದ್ದಾರೆ. ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಪ್ರೀತಿಯ ಮೇಲೆ ಮಗನಿಗೆ ರಚಿನ್ (ರ ಹಾಗೂ ಚಿನ್) ಎಂಬ ಹೆಸರನ್ನು ಇಡಲಾಗಿದೆ.
ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಶ್ವಕಪ್ ಪಂದ್ಯ ಆಡುವ ಮೂಲಕ ರಚಿನ್ ಕನ್ನಡಿಗರ ಪ್ರೀತಿ ಪಾತ್ರರಾಗಿದ್ದಾರೆ. ಅಲ್ಲದೆ ಅಭಿಮಾನಿಗಳು ‘ರಚಿನ್, ರಚಿನ್’ ಎಂದು ಜೈಕಾರ ಕೂಗುವ ದೃಶ್ಯವಕಂಡು ಬಂತು.
Advertisement. Scroll to continue reading.