ನವದೆಹಲಿ : ಈಗಾಗಲೇ ಭೂಕಂಪದಿಂದ ತತ್ತರಿಸಿರುವ ನೇಪಾಳದಲ್ಲಿ ಸೋಮವಾರ ಮತ್ತೆ ಪ್ರಬಲ ಭೂಕಂಪನ ಸಂಭವಿಸಿದೆ. ಪಶ್ಚಿಮ ನೇಪಾಳದಲ್ಲಿ 5.6 ತೀವ್ರತೆ ದಾಖಲಾಗಿದೆ. ಇದರಿಂದ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರದ ಕೇಂದ್ರ ತಿಳಿಸಿದೆ.
ಉತ್ತರ ಪ್ರದೇಶದ ಅಯೋಧ್ಯೆಯ ಉತ್ತರಕ್ಕೆ 233 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರಬಿಂದುವಿದೆ ಎಂದು ತಿಳಿಸಿದೆ. ದೆಹಲಿ ಮತ್ತು ಎನ್ ಸಿಆರ್ ನ ಹಲವೆಡೆ ಪೀಠೋಪಕರಣಗಳು ಅಲುಗಾಡಿದ ಬಗ್ಗೆ ವರದಿಯಾಗಿದ್ದು, ಭೂಕಂಪನ ಸ್ಥಳೀಯ ಜನರಲ್ಲಿ ಭೀತಿಯನ್ನುಂಟು ಮಾಡಿದೆ.
2015 ರ ನಂತರದ ಅತ್ಯಂತ ಭೀಕರವಾದ 6.4 ತೀವ್ರತೆಯ ಭೂಕಂಪವು ಶುಕ್ರವಾರ ರಾತ್ರಿ ನೇಪಾಳವನ್ನು ಅಪ್ಪಳಿಸಿತ್ತು. ಕನಿಷ್ಠ 157 ಜನರು ಸಾವನ್ನಪ್ಪಿದ್ದಾರೆ ಮತ್ತು 160 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
Advertisement. Scroll to continue reading.