ಕನಸಲ್ಲಿ ಬಂದ ಕೃಷ್ಣ; ಮುಸ್ಲಿಂ ವ್ಯಕ್ತಿಯ ಜಮೀನಿನಲ್ಲಿತ್ತು ದೇವಾಲಯದ ಕುರುಹು
Published
1
ಬೆಳ್ತಂಗಡಿ : ತೆಕ್ಕಾರು ಬಟ್ರಬೈಲು ಎಂಬಲ್ಲಿ 700 ವರ್ಷಗಳ ಹಿಂದಿನ ದೇವಸ್ಥಾನದ ಕುರುಹು ಪತ್ತೆಯಾಗಿದೆ. ಮುಸ್ಲಿಮರ ವಶದಲ್ಲಿದ್ದ ಜಮೀನನ್ನು ಶಾಸಕರ ಮುತುವರ್ಜಿಯಿಂದ ಮತ್ತೆ ಪಡೆದುಕೊಳ್ಳಲಾಗಿದೆ.
ಶ್ರೀಕೃಷ್ಣನೇ ಹಿಂದೂ ವ್ಯಕ್ತಿಯೊಬ್ಬರ ಕನಸಲ್ಲಿ ಬಂದು ದೇಗುಲ ಇರುವ ಬಗ್ಗೆ ಸುಳಿವು ನೀಡಿದ್ದು, ಜಾಗದಲ್ಲಿ ಶೋಧನೆ ಮಾಡಿದಾಗ ದೇಗುಲದ ಅವಶೇಷಗಳು ಹಾಗೂ ಗೋಪಾಲಕೃಷ್ಣ ಮೂರ್ತಿ ಇರುವುದು ಪತ್ತೆಯಾಗಿದೆ.
ದೇವರ ವಿಗ್ರಹ, ಪಾಣಿಪೀಠ, ಪಂಚಾಂಗದ ಕಲ್ಲುಗಳು ಪತ್ತೆಯಾಗಿವೆ. ಪ್ರಶ್ನಾ ಚಿಂತನೆ ಹಿನ್ನೆಲೆಯಲ್ಲಿ ಉತ್ಖನನದ ವೇಳೆ 15 ಅಡಿ ಆಳದಲ್ಲಿ ಪತ್ತೆಯಾಗಿದೆ.
Advertisement. Scroll to continue reading.
ಕನಸಲ್ಲಿ ಬಂದ ದೇವರು :
ಕಳೆದ 10 ವರ್ಷಗಳ ಹಿಂದೆ ಬೆಂಗಳೂರು ಮೂಲದ ಲಕ್ಷ್ಮಣ ಎಂಬವರಿಂದ ತೆಕ್ಕಾರು ಬಳಿ ಜಾಗ ಖರೀದಿ ಮಾಡಿದ್ದರು. ಈ ವೇಳೆ ಪ್ರಶ್ನಾ ಚಿಂತನೆ ವೇಳೆ ಲಕ್ಷ್ಮಣರ ಜಾಗದ ಸಮೀಪವೇ ಗೋಪಾಲಕೃಷ್ಣನ ದೇವಸ್ಥಾನ ಇರೋ ಸುಳಿವು ಸಿಕ್ಕಿತ್ತು. ಆದರೆ, ಲಕ್ಷ್ಮಣರ ಜಾಗದ ಸನಿಹ ಹಾಮದ್ ಬಾವಾ ಎಂಬವರ ಜಾಗವಿತ್ತು. ಪ್ರಶ್ನಾ ಚಿಂತನೆಯಲ್ಲಿ ಸುಳಿವು ದೊರೆತ ಜಾಗದಲ್ಲಿ ಬಾವಾಗೆ ಸೇರಿದ ಅಡಿಕೆ ತೋಟವಿತ್ತು. ಈ ಮಧ್ಯೆ ಲಕ್ಷಣ್ ಅವರ ಕನಸಿನಲ್ಲಿ ವಿಷ್ಣು ಬಂದು ಇರುವಿಕೆ ತೋರಿತ್ತು. ಬಾವಿಯ ಆಳದಲ್ಲಿ ವಿಷ್ಣುವಿನ ವಿಗ್ರಹದ ಮಾದರಿಯಲ್ಲಿ ಲಕ್ಷ್ಮಣರಿಗೆ ಬಿದ್ದಿದ್ದ ಕನಸು ಬಿದ್ದಿದೆ.
ಇದರ ನಂತರ ಲಕ್ಷ್ಮಣ ಅವರು ಮತ್ತೆ ಪ್ರಶ್ನಾ ಚಿಂತನೆ ಹಾಕಿದಾಗ ಮುಸ್ಲಿಂ ವ್ಯಕ್ತಿಯ ಜಾಗದಲ್ಲಿ ದೇವಸ್ಥಾನ ಇರೋ ಮಾಹಿತಿ ಲಭ್ಯವಾಗಿದೆ.
ಅದರಂತೆ ರವಿವಾರ ಬಾವಿ ನಿರ್ಮಾಣಕ್ಕೆ ಚಾಲನೆ ನೀಡಿದಾಗ ಸುಮಾರು 15 ಅಡಿ ಆಳದಲ್ಲಿ ಶ್ರೀ ಗೋಪಾಲಕೃಷ್ಣ ದೇವರ ಭಗ್ನ ಸ್ಥಿತಿಯ ವಿಗ್ರಹ, ದೀಪದ ಕಲ್ಲು, ದೇವಾಲ ಯದ ಅಡಿಪಾಯದ ಕುರುಹು, ಪತ್ತೆಯಾಗುವ ಮೂಲಕ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಮೂಡಿಬಂದ ವಿಚಾರಗಳು ಸತ್ಯವೆಂದು ದೃಢಪಟ್ಟಿವೆ. ಇಷ್ಟೇ ಅಲ್ಲದೆ ದೇವಾಲಯದ ಸೊತ್ತುಗಳೆನ್ನಲಾದ ಬಹಳಷ್ಟು ಶಿಲಾಮಯ ವಸ್ತುಗಳು ನೇತ್ರಾವತಿ ನದಿಗೆ ಇಳಿಯುವ ಜಾಗದಲ್ಲಿ ಕಾಣಿಸಿವೆ.
ಸಿಕ್ಕಿರುವ ಮೂರ್ತಿ ಸಹಿತ ಪರಿಕರಗಳನ್ನು ಶ್ರದ್ಧಾ ಭಕ್ತಿಯಿಂದ ಸಂರಕ್ಷಿಸಲಾಗಿದ್ದು, ಮುಂದಿನ ಕಾಮಗಾರಿಯ ವೇಳೆ ಇನ್ನಷ್ಟು ಅಂಶಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.