ಮಂಗಳೂರು: ಸಂಚಾರ ದಟ್ಟಣೆ ಹೆಚ್ಚುತ್ತಿರುವ ಕಾರಣ ಮಂಗಳೂರಿನ ಕೆಲವು ಸ್ಥಳಗಳಲ್ಲಿ ಶಬ್ಧ ಮಾಲಿನ್ಯ ಕಡಿಮೆ ಮಾಡುವ ಸಲುವಾಗಿ “ಹಾರ್ನ್ ನಿಷೇಧಿತ ಪ್ರದೇಶ”ಗಳನ್ನು ಮಂಗಳೂರು ಪೊಲೀಸರು ಗುರುತಿಸಿದ್ದಾರೆ.
ವಾಹನ ಹಾರ್ನ್ ಶಬ್ಧದ ಕಾರಣದಿಂದ ಸರ್ಕಾರಿ ಕಛೇರಿಗಳ ಕೆಲಸ ಕಾರ್ಯಗಳ, ಶಾಲಾ ಕಾಲೇಜು ವಿದ್ಯಾರ್ಥಿಗಳ ಮತ್ತು ಆಸ್ಪತ್ರೆಗಳಲ್ಲಿನ ರೋಗಿಗಳ ಆರೋಗ್ಯದ ದೃಷ್ಟಿಯಿಂದ ಹಾಗೂ ಶಬ್ದ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಸಾರ್ವಜನಿಕರ ಹಿತದೃಷ್ಠಿಯಿಂದ ಮಂಗಳೂರು ನಗರದ ನಿರ್ದಿಷ್ಟ ಪ್ರದೇಶಗಳನ್ನು ಹಾರ್ನ್ ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ.
ಎಲ್ಲೆಲ್ಲಿ ಹಾರ್ನ್ ನಿಷೇಧ? :
Advertisement. Scroll to continue reading.
1) ಲೇಡಿಗೋಷನ್ ಆಸ್ಪತ್ರೆಯ ಸುತ್ತುಮುತ್ತಲಿನ ಪ್ರದೇಶ:
– ರಾವ್ & ರಾವ್ ವೃತ್ತದ ಸಮೀಪದ ಮೈದಾನ 3ನೇ ಅಡ್ಡ ರಸ್ತೆಯಿಂದ ಲೇಡಿಗೋಶನ್ ಆಸ್ಪತ್ರೆವರೆಗೆ
– ಲೇಡಿಗೋಶನ್ ಆಸ್ಪತ್ರೆಯಿಂದ ಕ್ಲಾಕ್ ಟವರ್ ವರೆಗೆ
– ಲೇಡಿಗೋಶನ್ ಆಸ್ಪತ್ರೆಯಿಂದ ಕಲ್ಪನಾ ಸ್ವೀಟ್ಸ್ ವರೆಗೆ
2) ಹಂಪನಕಟ್ಟೆ ಜಂಕ್ಷನ್:
– ಹಂಪನಕಟ್ಟೆ ಜಂಕ್ಷನ್‍ನಿಂದ ಮಿಲಾಗ್ರಿಸ್ ಚರ್ಚ್ ವರೆಗಿನ ಪ್ರದೇಶ
– ಮಿಲಾಗ್ರಿಸ್ ಚರ್ಚ್ ಬಳಿಯ ವೆನ್ಲಾಕ್ ಆಸ್ಪತ್ರೆಯ ಗೇಟ್ ನಿಂದ ಮುತ್ತಪ್ಪ ಗುಡಿಯವರೆಗೆ
– ಹಂಪನಕಟ್ಟೆ ಜಂಕ್ಷನ್‌ನಿಂದ ಮಿನಿ ವಿಧಾನ ಸೌಧ ಕಟ್ಟಡದವರೆಗೆ
3) ಡಾ. ಅಂಬೇಡ್ಕರ್ ವೃತ್ತದ ಸುತ್ತಲಿನ ಪ್ರದೇಶ:
– ಅಂಬೇಡ್ಕರ್ ವೃತ್ತದಿಂದ ಬಲ್ಮಠ ಜಂಕ್ಷನ್ ಕಡೆಗೆ 50 ಮೀಟರ್ ಪ್ರದೇಶ
– ಅಂಬೇಡ್ಕರ್ ವೃತ್ತದಿಂದ ಬಂಟ್ಸ್ ಹಾಸ್ಟೆಲ್ ವೃತ್ತದ ಕಡೆಗೆ 50 ಮೀಟರ್ ಪ್ರದೇಶ
– ಅಂಬೇಡ್ಕರ್ ವೃತ್ತದಿಂದ ಬಂಟ್ಸ್ ಹಾಸ್ಟೆಲ್ ವೃತ್ತದ ಕಡೆಗೆ 50 ಮೀಟರ್ ಪ್ರದೇಶ
– ಅಂಬೇಡ್ಕರ್ ವೃತ್ತದಿಂದ ಹಂಪನಕಟ್ಟೆ ವೃತ್ತದ ಕಡೆಗೆ 50 ಮೀಟರ್ ಪ್ರದೇಶ
– ಬಾವುಟಗುಡ್ಡ (ಮಹಿಳಾ ಸಭಾ ಕಟ್ಟಡ) ದಿಂದ ಅಂಬೇಡ್ಕರ್ ವೃತ್ತದ ವರೆಗೆ
4) ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯ ಉತ್ತರ ಬದಿಯ ಕಂಪೌಂಡ್ ಸಮೀಪದಿಂದ ಬಿಷಪ್ ವಿಕ್ಟರ್( ಅತ್ತಾವರ ನ್ಯೂ ರೋಡ್) ತಿರುವಿನವರೆಗೆ
5) ದೇರಳಕಟ್ಟೆ ಯೇನಪೋಯ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ 100 ಮೀಟರ್ ಪ್ರದೇಶ
6) ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ 100 ಮೀಟರ್ ಪ್ರದೇಶ
ಉಲ್ಲಂಘಿಸಿದರೆ ದಂಡ :
ನಿಯಮವನ್ನು ಉಲ್ಲಂಘಿಸಿದರೆ, ಭಾರತೀಯ ಮೋಟಾರು ವಾಹನ ಅಧಿನಿಯಮ (ತಿದ್ದುಪಡಿ) 2019 ರ ಕಲಂ 194 (ಎಫ್) ರಂತೆ ಹಾರ್ನ್ ನಿಷೇಧಿಸಿದ ಸಂಚಾರ ಸೂಚನಾ ಫಲಕ ಇರುವ ಪ್ರದೇಶದಲ್ಲಿ ಹಾರ್ನ್ ಬಳಸಿದ್ದಲ್ಲಿ ಅಂತಹ ವಾಹನ ಚಾಲಕರ ಮೇಲೆ ಮೊದಲನೆಯ ಉಲ್ಲಂಘನೆಗೆ ರೂ 1000/- ದಂಡವನ್ನು ಹಾಗೂ ಎರಡನೆ ಹಾಗೂ ನಂತರದ ಪ್ರತಿ ಉಲ್ಲಂಘನೆಗೆ ರೂ 2000/- ದಂಡವನ್ನು ವಿಧಿಸಲಾಗುವುದು ಎಂದು ಪೊಲೀಸ್ ಇಲಾಖೆ ಪ್ರಕಟಣೆ ಮಾಹಿತಿ ನೀಡಿದೆ.
Advertisement. Scroll to continue reading.