ಮಂಜೇಶ್ವರ : ಯಾರಿಗೆ ಯಾವಾಗ ಅದೃಷ್ಟ ದೇವತೆ ಒಲಿಯುತ್ತಾಳೆ ಎಂದು ಹೇಳಲಾಗದು. ರಾತ್ರೋರಾತ್ರಿ ಅದೃಷ್ಟ ಖುಲಾಯಿಸಿ ಶ್ರೀಮಂತರಾದರೂ ಇದ್ದಾರೆ. ಈ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ.
ಕೇರಳ ರಾಜ್ಯ ಲಾಟರಿಯ ಪೂಜಾ ಬಂಪರ್ ಡ್ರಾ ಬುಧವಾರ(ನ.೨೨) ನಡೆದಿದೆ. ಇದರಲ್ಲಿ ಪ್ರಥಮ ಬಹುಮಾನ 12 ಕೋಟಿ ರೂಪಾಯಿ JC – 253199 ನಂಬರ್ಗೆ ಒಲಿದಿದೆ.
ವರ್ಕಾಡಿಯ ಮಜೀರ್ಪಳ್ಳದಲ್ಲಿ ಲಾಟರಿ ಏಜೆಂಟ್ ಆಗಿರುವ (ಏಜೆನ್ಸಿ ಸಂಖ್ಯೆ 51447) ಮೇರಿಕುಟ್ಟಿ ಜೊಜೊ ಅವರು ಮಾರಾಟ ಮಾಡಿದ ಟಿಕೆಟ್ಗೆ ಲಕ್ಷ್ಮಿ ಒಲಿದಿದ್ದಾಳೆ. ಆದರೆ 12 ಕೋಟಿ ಗೆದ್ದ ಭಾಗ್ಯವಂತ ಯಾರು ಎಂಬುದು ತಿಳಿದುಬಂದಿಲ್ಲ.
ತಿರುವನಂತಪುರಂನಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆಗೆ ಡ್ರಾ ನಡೆದಿದ್ದು, ಈ ಬಾರಿ 300 ರೂಪಾಯಿ ಟಿಕೆಟ್ನಲ್ಲಿ 12 ಕೋಟಿ ಬಂಪರ್ ಬಹುಮಾನ ಇತ್ತು.
ಎರಡನೇ ಬಹುಮಾನ ನಾಲ್ವರಿಗೆ ತಲಾ 1 ಕೋಟಿ, 3 ನೇ ಬಹುಮಾನ 10 ಮಂದಿಗೆ ತಲಾ 10 ಲಕ್ಷ, 4 ನೇ ಬಹುಮಾನ 5 ಮಂದಿಗೆ ತಲಾ 3 ಲಕ್ಷ,5 ನೇ ಬಹುಮಾನವಾಗಿ 2 ಲಕ್ಷ ಸಿಗಲಿದೆ.
Advertisement. Scroll to continue reading.