ಅಂತಾರಾಷ್ಟ್ರೀಯ

80 ವರ್ಷದ ಅಜ್ಜಿಯೊಂದಿಗೆ ಲವ್; ದಾಂಪತ್ಯ ಜೀವನಕ್ಕೆ ಕಾಲಿರಿಸಿದ 57 ವರ್ಷದ ವ್ಯಕ್ತಿ!

1

ಇತ್ತೀಚೆಗೆ ತಮಗಿಂತ ಹಿರಿಯರನ್ನೋ ಅಥವಾ ಕಿರಿಯರನ್ನು ಮದುವೆಯಾಗುವುದು ಸಾಮಾನ್ಯ. ಆದ್ರೆ ಮುದುಕಿಯನ್ನು ಮದುವೆಯಾಗ್ತಾರಾ? ಇಂತಹುದೊಂದು ಅಪರೂಪದ ಘಟನೆ ನಡೆದಿದೆ. ಹೌದು, 57 ವರ್ಷದ ಕ್ಯಾಲಿಫೋರ್ನಿಯಾದ ವ್ಯಕ್ತಿ ತನಗಿಂತ 23 ವರ್ಷ ಹಿರಿಯ ಅಂದರೆ 80 ವರ್ಷದ ಮುದುಕಿಯ ಪ್ರೀತಿಸಿ, ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. 

ಡೇವಿಡ್ ಫೌಟ್(57) ಮತ್ತು ಕ್ಯಾರೊಲಿನ್ ಹಾಲೆಂಡ್ (80) ಇಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ.

ಕ್ಯಾಲಿಫೋರ್ನಿಯಾದ ನಿವಾಸಿ ಡೇವಿಡ್ ಸ್ವಂತ ಮನೆ ಹೊಂದಿಲ್ಲ ಜೊತೆಗೆ ಖಾಯಂ ಕೆಲಸವಿಲ್ಲ. ಪ್ರತಿ ದಿನ ಸಣ್ಣಪುಟ್ಟ ರಿಪೇರಿ ಕೆಲಸಗಳನ್ನು ಮಾಡಿಕೊಂಡು ಜೀವನ ಕಳೆಯುತ್ತಿದ್ದರು. ಆದರೆ ಕೆಲವು ವಾರಗಳ ಹಿಂದೆ 80 ವರ್ಷದ ಕ್ಯಾರೋಲಿನ್ ಅವರನ್ನು ಭೇಟಿಯಾಗಿದ್ದು, ಇಬ್ಬರ ನಡುವೆ ಪ್ರೀತಿ ಅರಳಿದೆ. ಕ್ಯಾರೋಲಿನ್ ಬಹಳ ಶ್ರೀಮಂತ ಮಹಿಳೆ. ಈಕೆಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಡೇವಿಡ್ ತಮ್ಮ ತಾಯಿಯನ್ನು ಹಣಕ್ಕಾಗಿ ಪ್ರೀತಿಯ ಹೆಸರಿನಲ್ಲಿ ವಂಚಿಸಿದ್ದಾರೆ ಎಂದು ಕ್ಯಾರೋಲಿನ್ ಮಕ್ಕಳು ಆರೋಪಿಸಿದ್ದಾರೆ.

Advertisement. Scroll to continue reading.

ನಿರಾಶ್ರಿತನಾದ ಡೇವಿಡ್ :

5 ಕೋಟಿ ಮೌಲ್ಯದ ಆಸ್ತಿಯನ್ನು ಮಾರಿ ಡೇವಿಡ್‌ಗೆ ಸಂಪೂರ್ಣ ಹಣವನ್ನು ನೀಡುವುದಾಗಿ ಕ್ಯಾರೊಲಿನ್ ಭರವಸೆ ನೀಡಿದ್ದರು. ಆದರೆ ಈ ನಡುವೆ ಕ್ಯಾರೋಲಿನ್ ಅವರ ಆರೋಗ್ಯವು ಹದಗೆಟ್ಟಿತು ಮತ್ತು ಸ್ವಲ್ಪ ಸಮಯದೊಳಗೆ ಅವರು ಸಾವನ್ನಪ್ಪಿದರು. ಆದರೆ ಕ್ಯಾರೊಲಿನ್ ಮರಣದ ನಂತರ ಆಕೆಯ ಎಲ್ಲಾ ಆಸ್ತಿಯನ್ನು ಆಕೆಯ ಇಬ್ಬರು ಹೆಣ್ಣುಮಕ್ಕಳು ಪಡೆದುಕೊಂಡಿದ್ದು,ಡೇವಿಡ್‌‌ಗೆ ಒಂದು ಪೈಸೆಯನ್ನೂ ನೀಡಲಿಲ್ಲ. ಈಗ ಡೇವಿಡ್ ಮತ್ತೆ ನಿರಾಶ್ರಿತನಾಗಿ ತನ್ನ ಹಳೆಯ ಜೀವನವನ್ನು ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com