ರಾಜ್ಯ

ರಾಕ್‌ಲೈನ್ ವೆಂಕಟೇಶ್ ಸಹೋದರನ ಮನೆಯಲ್ಲಿ ಕಳವು ಪ್ರಕರಣ; 7 ನೇಪಾಳಿ ಪ್ರಜೆಗಳ ಬಂಧನ, 3 ಕೆಜಿ ಚಿನ್ನ ವಶ

1

ಬೆಂಗಳೂರು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರ ಸಹೋದರನ ಮನೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏಳು ನೇಪಾಳಿಗರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಉಪೇಂದ್ರ, ನಾರಾ ಬಹದ್ದೂರ್, ಖಕೇಂದ್ರ ಶಾಹಿ, ಕೋಮಲ್, ಸ್ವಸ್ತಿಕಾ, ಪಾರ್ವತಿ ಮತ್ತು ಶಾದಲಾ ಎಂದು ಗುರುತಿಸಲಾಗಿದೆ.

ಬಂಧಿತರಿಂದ 3 ಕೆಜಿ ಚಿನ್ನ ಸೇರಿದಂತೆ 1.53 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement. Scroll to continue reading.

ಆರೋಪಿಗಳು ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ನಿವಾಸದಿಂದ ಸುಮಾರು ಐದು ಕೆಜಿ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದರು. ಅಕ್ಟೋಬರ್ 21 ಮತ್ತು 29ರ ನಡುವೆ 58 ವರ್ಷದ ಟಿಎನ್ ಬ್ರಮರೇಶ್ ಅವರ ನಿವಾಸದಲ್ಲಿ ಅವರು ಮತ್ತು ಅವರ ಕುಟುಂಬ ಗ್ರೀಸ್‌ಗೆ ತೆರಳಿದ್ದಾಗ ಕಳ್ಳತನ ನಡೆದಿತ್ತು. ಪ್ರವಾಸದಿಂದ ಮರಳಿದ ಬಳಿಕ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತ್ತು.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com