ಹಿರಿಯಡಕ: ರಸ್ತೆ ಬದಿಯಲ್ಲೇ ತಂದು ಸುರಿಯಲಾಗುತ್ತೆ ಕಸ; ಇಲ್ಲಿ ಹೇಳೋರಿಲ್ಲ, ಕೇಳೋರಿಲ್ಲ
Published
0
ಹಿರಿಯಡಕ : ಒಂದೆಡೆ ಸ್ವಚ್ಚ ಭಾರತದ, ಗ್ರಾಮದ ಪರಿಕಲ್ಪನೆಗಳು ಗಟ್ಟಿಯಾಗುವತ್ತಾ ಶ್ರಮಿಸುವ ಬಗೆಗೆ ಕಾರ್ಯಗಳು ನಡೆಯುತ್ತಿವೆ. ಇನ್ನೊಂದ್ಕಡೆ ನಾವ್ ಸ್ವಚ್ಛತೆಯನ್ನು ಕಾಪಾಡೋಲ್ಲ ನಿಮಗೇನ್ರೀ ಅನ್ನೋವಂತಹ ಕೆಟ್ಟ ನಿಲುವುಗಳು ಕಾಣುತ್ತಿದೆ. ಇಂತಹ ಮನಸ್ಥಿತಿಗೆ ಸಾಕ್ಷಿ ಬೇಕಾದ್ರೆ ನೀವು ಇತ್ತ ಬರಬೇಕು. ಕಾಜಾರಗುತ್ತು – ಹಿರೇಬೆಟ್ಟು ರಸ್ತೆ, ಮುತ್ತೂರು -ಕೊಂಡಾಡಿ- ಹಿರಿಯಡ್ಕ ಸಂಪರ್ಕಿಸುವ ರಸ್ತೆ ಬದಿಗಳಲ್ಲಿ ಕಸದ ರಾಶಿ ನಿಮಗೆ ಕಾಣ ಸಿಗುತ್ತದೆ.
ರಸ್ತೆಯ ಇಕ್ಕೆಲಗಳಲ್ಲೂ ಕಸದ ರಾಶಿಯೇ ನಿಮಗೆ ಕಾಣ ಸಿಗುತ್ತದೆ. ಗೋಣಿ ಚೀಲಗಳಲ್ಲೇ ಕಸ ತುಂಬಿಸಿ ತಂದು ಎಸೆದು ಹೋಗಲಾಗುತ್ತಿದೆ. ಆದರೆ, ಈ ಬಗ್ಗೆ ಗ್ರಾಮ ಪಂಚಾಯಿತಿಯೂ ತಲೆ ಕೆಡಿಸಿಕೊಂಡಂತಿಲ್ಲ. ಓಡಾಡೋ ಮಂದಿಗೆ, ಗ್ರಾಮಸ್ಥರಿಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಗಮನ ಹರಿಸಿ ಈ ಸಮಸ್ಯೆಗೆ ಫುಲ್ ಸ್ಟಾಪ್ ಹಾಕಿ ಎಂದು ಆಗ್ರಹಿಸುತ್ತಿದ್ದಾರೆ.