ದುಬೈ : ಜನಸಂಖ್ಯೆ ಕಡಿಮೆ ಇರುವ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಇಂಗಾಲ ಹೊರಸೂಸುವಿಕೆ ತುಂಬಾ ಕಡಿಮೆ ಎಂದು ಹೇಳಿದರು.
ದುಬೈನಲ್ಲಿ ನಡೆದ ಸಿಒಪಿ 28 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಿದರು.
ಇನ್ನು ಇದೇ ವೇಳೆ ಭಾರತವು 2028ರಲ್ಲಿ ಸಿಒಪಿ 33 ಅನ್ನು ಆಯೋಜಿಸಲು ಬಯಸುತ್ತದೆ ಎಂದು ಪ್ರಸ್ತಾಪ ಮುಂದಿಟ್ಟರು.
Advertisement. Scroll to continue reading.
ಭಾರತದ ಜನಸಂಖ್ಯೆಯು ಜಾಗತಿಕ ಜನಸಂಖ್ಯೆಯ ಶೇಕಡಾ 17ರಷ್ಟಿದೆ, ಆದರೆ ಜಾಗತಿಕ ಇಂಗಾಲದ ಹೊರಸೂಸುವಿಕೆಗೆ ಶೇ.4ಕ್ಕಿಂತ ಕಡಿಮೆ ಕೊಡುಗೆ ನೀಡುತ್ತಿದೆ. ಎನ್ ಡಿಸಿ ಗುರಿಗಳನ್ನು ಸಾಧಿಸುವಲ್ಲಿ ನಾವು ವೇಗವಾಗಿ ಸಾಗುತ್ತಿದ್ದೇವೆ. ವಾಸ್ತವವಾಗಿ, ನಾವು ಗಡುವಿನ ಒಂಬತ್ತು ವರ್ಷಗಳ ಮೊದಲು ನಮ್ಮ ಪಳೆಯುಳಿಕೆಯೇತರ ಇಂಧನ ಗುರಿಗಳನ್ನು ತಲುಪಿದ್ದೇವೆ ಎಂದು ತಿಳಿಸಿದರು.
ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸುವ ರಾಷ್ಟ್ರೀಯ ಯೋಜನೆಗಳು ಅಥವಾ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಪ್ಪಿಸಲು ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳನ್ನು ಸಾಧಿಸುವ ಹಾದಿಯಲ್ಲಿರುವ ವಿಶ್ವದ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದೆ.
ಜಾಗತಿಕವಾಗಿ ಇಂಗಾಲ ಹೊರಸೂಸುವಿಕೆಯನ್ನ ತೀವ್ರವಾಗಿ ಕಡಿಮೆ ಮಾಡಲು ಎಲ್ಲಾ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಇಂದು ಕರೆ ನೀಡಿದರು.
Advertisement. Scroll to continue reading.