ಅಬುಧಾಬಿ : ಮುಂಬರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆಟಗಾರರ ಮಿನಿ ಹರಾಜು ಡಿಸೆಂಬರ್ 19 ರಂದು ನಡೆಯಲಿದೆ. ನವೆಂಬರ್ 30ರ ವರೆಗೂ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಆಟಗಾರರಿಗೆ ಅವಕಾಶ ನೀಡಲಾಗಿತ್ತು. ಶುಕ್ರವಾರ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಹಂಚಿಕೊಂಡ ಪಟ್ಟಿಯಲ್ಲಿ ಒಟ್ಟು 1,166 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಆಸೀಸ್ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ 2015ರಲ್ಲಿ ಐಪಿಎಲ್‌ನಲ್ಲಿ ಆಡಿದ್ದರು. ಆರ್‌ಸಿಬಿ ತಂಡದಲ್ಲಿ ಮಿಂಚಿದ್ದರು. ಆ ನಂತರ ಐಪಿಎಲ್‌ನಿಂದ ದೂರ ಉಳಿದಿದ್ದರು. 2023ರಲ್ಲಿ ಆಶಸ್ ಟೂರ್ನಿಯಿಂದಾಗಿ ಐಪಿಎಲ್‌ನಿಂದ ಹೊರಗುಳಿದ್ದರು. ಇನ್ನೂ ಜೋಶ್ ಹೇಝಲ್ವುಡ್, ಲೀಗ್ ಸುತ್ತಿನ ಕೆಲ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದು ಅನುಮಾನವಿದೆ. ಹೀಗಿದ್ದೂ ಅವರು ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.
ಈ ಬಾರಿ ಐಪಿಎಲ್ ಮಿನಿ ಹರಾಜಿಗೆ ನೋಂದಣಿ ಮಾಡಿಕೊಂಡಿರುವ ಒಟ್ಟು 1,166 ಆಟಗಾರರ ಪೈಕಿ 830 ಭಾರತೀಯ ಆಟಗಾರರಿದ್ದರೆ, 336 ವಿದೇಶಿ ಆಟಗಾರರು ಇದ್ದಾರೆ. ಈ ಪಟ್ಟಿಯಲ್ಲಿ 212 ಕ್ಯಾಪ್ಡ್, 909 ಅನ್‌ಕ್ಯಾಪ್ಡ್ ಮತ್ತು 45 ಅಸೋಸಿಯೇಟ್ ದೇಶದ ಆಟಗಾರರು ಸೇರಿದ್ದಾರೆ.
Advertisement. Scroll to continue reading.
830 ಭಾರತೀಯರ ಪೈಕಿ ವರುಣ್ ಆರೋನ್, ಕೆ.ಎಸ್ ಭರತ್, ಕೇದಾರ್ ಜಾಧವ್, ಸಿದ್ಧಾರ್ಥ್ ಕೌಲ್, ಧವಳ್ ಕುಲಕರ್ಣಿ, ಶಿವಂ ಮಾವಿ, ಶಹಬಾಜ್ ನದೀಮ್, ಕರುಣ್ ನಾಯರ್, ಮನೀಶ್ ಪಾಂಡೆ, ಚೇತನ್ ಸಕಾರಿಯ, ಮನ್‌ದೀಪ್ ಸಿಂಗ್, ಬರೀಂದರ್ ಸ್ರಾನ್ ಸೇರಿದಂತೆ 18 ಆಟಗಾರರಿದ್ದಾರೆ.