ರಾಷ್ಟ್ರೀಯ

ವಾಯುಸೇನೆಯ ತರಬೇತಿ ವಿಮಾನ ಪತನ; ಇಬ್ಬರು ಪೈಲಟ್ ಗಳು ನಿಧನ

2

ಮೇದಕ್: ತೆಲಂಗಾಣದ ಮೇದಕ್‌ನಲ್ಲಿ ವಾಯುಸೇನೆಗೆ ಸೇರಿದ ತರಬೇತಿ ವಿಮಾನವೊಂದು ಪತನಗೊಂಡ ಪರಿಣಾಮ ಅದರಲ್ಲಿದ್ದ ಇಬ್ಬರು ಭಾರತೀಯ ವಾಯುಸೇನೆಯ ಪೈಲಟ್‌ಗಳು ಸಾವನ್ನಪ್ಪಿದ್ದಾರೆ.
ತರಬೇತಿ ವಿಮಾನವೂ ಹೈದರಾಬಾದ್‌ನಲ್ಲಿರುವ ಏರ್ಪೋರ್ಸ್ನ ವಾಯುನೆಲೆಯಿಂದ ದೈನಂದಿನ ತರಬೇತಿಗಾಗಿ ಟೇಕಾಫ್ ಆಗಿತ್ತು. ಇದಾಗಿ ಸ್ವಲ್ಪ ಹೊತ್ತಿನಲ್ಲಿ ವಿಮಾನ ಪತನಗೊಂಡಿದೆ. ಪರಿಣಾಮ ಇಬ್ಬರು ಪೈಲಟ್‌ಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಒಬ್ಬರು ತರಬೇತಿದಾರ ಪೈಲಟ್ ಹಾಗೂ ಮತ್ತೊಬ್ಬ ಟ್ರೈನಿ ಪೈಲೆಟ್ ಈ
ವಿಮಾನದಲ್ಲಿದ್ದು ಇಬ್ಬರೂ ದುರಂತದಲ್ಲಿ ಮಡಿದಿದ್ದಾರೆ ಎಂದು ಭಾರತೀಯ ವಾಯುಸೇನೆ ಮಾಹಿತಿ ನೀಡಿದೆ.

ಈ ಬಗ್ಗೆ ಭಾರತೀಯ ವಾಯುಸೇನೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಒಂದು ಪಿಲಟಸ್ ಪಿಸಿ ೭ಎಂಕೆ II (Pilatus PC 7 Mk II) ವಿಮಾನವೂ ದೈನಂದಿನ ತರಬೇತಿಗಾಗಿ ಹೈದರಾಬಾದ್‌ನ ವಾಯುನೆಲೆಯಿಂದ ಟೇಕಾಫ್ ಆಗಿದ್ದು ನಂತರ ಪತನಗೊಂಡಿದೆ. ಈ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅತೀವವಾದ ನೋವಿನೊಂದಿಗೆ ಖಚಿತಪಡಿಸುತ್ತಿದ್ದೇವೆ ಎಂದು ಭಾರತೀಯ ವಾಯುಸೇನೆ ಹೇಳಿದೆ.

Advertisement. Scroll to continue reading.

ಈ ಘಟನೆಗೆ ಸಂಬAಧಿಸಿದAತೆ ಕೋರ್ಟ್ ತನಿಖೆಗೆ ಆದೇಶಿಸಲಾಗಿದೆ ಎಂದು ಏರ್‌ಪೋರ್ಸ್ ಪ್ರಕಟಣೆಯಲ್ಲಿ ಹೇಳಿದೆ.

ರಾಜನಾಥ್ ಸಿಂಗ್ ಸಂತಾಪ :

ಇನ್ನು ಈ ಘಟನೆಗೆ ರಕ್ಷಣ ಸಚಿವ ರಾಜನಾಥ್ ಸಿಂಗ್ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್ ಸಮೀಪ ನಡೆದ ವಿಮಾನ ದುರಂತದಲ್ಲಿ ಇಬ್ಬರು ಪೈಲಟ್‌ಗಳು ಪ್ರಾಣ ಕಳೆದುಕೊಂಡಿದ್ದರಿAದ ತೀವ್ರ ನೋವಾಗಿದ್ದು, ಸಂತ್ರಸ್ತರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com