ನವದೆಹಲಿ : ಚಂದ್ರಯಾನ -3 ರ ಪ್ರೊಪಲ್ಷನ್ ಮಾಡ್ಯೂಲ್ (ಪಿಎಂ) ಅನ್ನು ಚಂದ್ರನ ಸುತ್ತಲಿನ ಕಕ್ಷೆಯಿಂದ ಭೂಮಿಯ ಸುತ್ತಲಿನ ಕಕ್ಷೆಗೆ ಸ್ಥಳಾಂತರಿಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಚಂದ್ರನ ಕಾರ್ಯಾಚರಣೆಯ ಉದ್ದೇಶ ಪೂರೈಸಿದ ನಂತರ ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಚಂದ್ರನಿಂದ ಭೂಮಿಗೆ ಕಕ್ಷೆ ಬದಲಿಸಲಾಗಿದೆ. ಚಂದ್ರನ ಮೇಲೆ ಉಪಗ್ರಹ ಉಡಾವಣೆ ಮಾಡುವುದು ಮಾತ್ರವಲ್ಲ, ಅದರ ಉಪಕರಣಗಳನ್ನು ಹಿಂತಿರುಗಿ ತರುವ ಕಾರ್ಯದಲ್ಲೂ ಇಸ್ರೋ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಇಸ್ರೋ, ವಿಕ್ರಮ್ ಲ್ಯಾಂಡರ್‌ನಲ್ಲಿನ ಹಾಪ್ ಪ್ರಯೋಗದಂತೆ ಮತ್ತೊಂದು ವಿಶಿಷ್ಟ ಪ್ರಯೋಗದಲ್ಲಿ ಚಂದ್ರಯಾನ-3 ರ ಪ್ರೊಪಲ್ಷನ್ ಮಾಡ್ಯೂಲ್ (PM) ಅನ್ನು ಚಂದ್ರನ ಸುತ್ತಲಿನ ಕಕ್ಷೆಯಿಂದ ಭೂಮಿಯ ಸುತ್ತಲಿನ ಕಕ್ಷೆಗೆ ಸ್ಥಳಾಂತರಿಸಲಾಯಿತು ಎಂದಿದೆ.
Advertisement. Scroll to continue reading.
ಜುಲೈ 14, 2023 ರಂದು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಎಸ್ಡಿಎಸ್ಸಿ-ಶಾರ್) ಎಲ್ವಿಎಂ 3-ಎಂ 4 ವಾಹನದಲ್ಲಿ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಯಿತು. ಆಗಸ್ಟ್ 23 ರಂದು, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಐತಿಹಾಸಿಕ ಭೂಸ್ಪರ್ಶ ಮಾಡಿತು.