ಕೇರಳ : ಎರ್ನಾಕುಲಂ ಜಿಲ್ಲೆಯ ಸಮೀಪದ ಆಲುವಾದಲ್ಲಿ ಯುವಕನೋರ್ವ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ತನ್ನ ಸಾವಿನ ಬಗ್ಗೆ ಪೋಸ್ಟ್ ಹಾಕಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅಜ್ಮಲ್ ಶೆರೀಫ್(28) ಮೃತ ಯುವಕ.
ಶುಕ್ರವಾರ ಸಂಜೆ 6.30ರ ಸುಮಾರಿಗೆ ಅಜ್ಮಲ್ ಶೆರೀಫ್ ಎಂಬ ವ್ಯಕ್ತಿ ತನ್ನ ಮನೆಯ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಉತ್ತಮ ಕೆಲಸ ಸಿಗದ ಕಾರಣ ಆತ ಕೊಂಚ ಖಿನ್ನತೆಗೆ ಒಳಗಾಗಿದ್ದ ಎಂದು ಕುಟುಂಬದವರು ಹೇಳಿದ್ದಾರೆ
ಎಂದು ಪೊಲೀಸರು ತಿಳಿಸಿದ್ದಾರೆ.
Advertisement. Scroll to continue reading.
ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.
ಅಜ್ಮಲ್ ಅವರ ಇನ್ಸ್ಟಾಗ್ರಾಮ್ ಪುಟವು 14 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ.
ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಅಜ್ಮಲ್, ತನ್ನ ಫೋಟೋ ಮತ್ತು ‘RIP ಅಜ್ಮಲ್ ಶೆರೀಫ್ 1995-2023’ ಎಂಬ ಶೀರ್ಷಿಕೆಯೊಂದಿಗೆ ಇನ್ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದಾರೆ.
Advertisement. Scroll to continue reading.