ಉಡುಪಿ : ಸಾಮಾಜಿಕ ಕಳಕಳಿಯ ಪ್ರಶ್ನೆಗಳನ್ನು ಕೇಳಿದ ವಿದ್ಯಾರ್ಥಿನಿಯೊಬ್ಬಳಿಗೆ ಜಿ.ಪಂ.ಸಿಇಒ ಅರ್ಧಗಂಟೆ ತನ್ನ ಹುದ್ದೆ ಬಿಟ್ಟುಕೊಟ್ಟಿರುವ ಘಟನೆ ನಡೆದಿದೆ. ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜಿನ ಎಸೆಸೆಲ್ಸಿ ವಿದ್ಯಾರ್ಥಿನಿ ವರ್ಷಾ ಅವಕಾಶ ಗಿಟ್ಟಿಸಿಕೊಂಡ ವಿದ್ಯಾರ್ಥಿನಿ. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಪ್ರತಿಭಾನ್ವಿತ ಬಾಲಕಿಯರಿಗೆ ಇಂದು ಉಡುಪಿ ಜಿಪಂ ಸಭಾಂಗಣದಲ್ಲಿ ಕಾರ್ಯಗಾರದ ಸಂವಾದ ಏರ್ಪಡಿಸಲಾಗಿತ್ತು. ಸಂವಾದದಲ್ಲಿ ಮಕ್ಕಳು ಸ್ವಚ್ಛತೆ, ಗ್ರಾಮೀಣ ರಸ್ತೆ ನಿರ್ಮಾಣ, ಚರಂಡಿ ವ್ಯವಸ್ಥೆ ಮೊದಲಾದ ಪ್ರಶ್ನೆಗಳನ್ನು ಸಿಇಒಗೆ ಕೇಳಿದರು. ಈ ವೇಳೆ ಸಾಮಾಜಿಕ ಕಳಕಳಿಯ ಹಲವು ಪ್ರಶ್ನೆಗಳನ್ನು ಕೇಳಿದ ವರ್ಷಾಳಿಗೆ ಸಿಇಒ ಡಾ.ನವೀನ್ ಭಟ್, ತನ್ನ ಹುದ್ದೆ ಬಿಟ್ಟು ಕೊಟ್ಟು, ಕುರ್ಚಿಯ ಮೇಲೆ ಕೂರಿಸಿದರು. ಈ ವೇಳೆ ವರ್ಷಾ ಪ್ಲಾಸ್ಟಿಕ್ ವಿಲೇವಾರಿ, ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆ, ನಿರುದ್ಯೋಗ ನಿವಾರಣೆ ಕುರಿತು ಸಿಇಒ ಬಳಿ ಚರ್ಚಿಸಿದ್ದು, ಆಕೆಯ ಪ್ರಶ್ನೆಗಳಿಗೆ ಉತ್ತರ ನೀಡಿದರು.
Advertisement. Scroll to continue reading.