ಉಡುಪಿ : ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಇಮಾ.ವಿ ಎಂಬವರ ವಾಟ್ಸಾಪ್ಗೆ 2022ರ ಆ.20ರಂದು ಅಪರಿಚಿತ ವ್ಯಕ್ತಿ ವಿದೇಶದಲ್ಲಿ ಉದ್ಯೋಗ ಕೊಡಿಸುವ ಬಗ್ಗೆ ಸಂದೇಶ ಕಳುಹಿಸಿದ್ದಾರೆ.
ಇದನ್ನು ನಂಬಿದ ಇಮಾ ಅಪರಿಚಿತ ವ್ಯಕ್ತಿ ಸೂಚಿಸಿದ ಬ್ಯಾಂಕ್ ಉಳಿತಾಯ ಖಾತೆಗೆ ಆ.23ರಿಂದ ನ.7ರತನಕ ಹಂತ ಹಂತವಾಗಿ ಒಟ್ಟು 7,65,000ರೂ. ಹಣವನ್ನು ಆನ್ಲೈನ್ ಹಾಗೂ ಡೆಪಾಸಿಟ್ ಮೂಲಕ ವರ್ಗಾವಣೆ ಮಾಡಿದ್ದರು.
Advertisement. Scroll to continue reading.
ಆದರೆ ಈವರೆಗೆ ಇಮಾ ಅವರಿಗೆ ವಿದೇಶದಲ್ಲಿ ಉದ್ಯೋಗಕ್ಕೆ ವೀಸಾ ನೀಡದೇ, ಹಣವನ್ನೂ ಹಿಂದಿರುಗಿಸದೇ ವಂಚಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.