ಹಿಂದೂ ಮಹಾಸಾಗರದಲ್ಲಿ ಇಸ್ರೇಲ್‌ಗೆ ಸಂಬಂಧಿಸಿದ ವ್ಯಾಪಾರಿ ಹಡಗಿನ ಮೇಲೆ ಡ್ರೋನ್ ದಾಳಿ ನಡೆದಿದೆ. ಆದರೆ ಯಾವುದೇ ಸಾವುನೋವುಗಳನ್ನು ಉಂಟುಮಾಡಲಿಲ್ಲ ಎಂದು ವರದಿಯಾಗಿದೆ. ಒಂದು ಹಡಗು ಇಸ್ರೇಲ್‌ಗೆ ಸಂಬಂಧಿಸಿದೆ ಎನ್ನಲಾಗಿದೆ.
ಬ್ರಿಟಿಷ್ ಮಿಲಿಟರಿಯ ಯುನೈಟೆಡ್ ಕಿಂಗ್‌ಡಮ್ ಮಾರಿಟೈಮ್ ಟ್ರೇಡ್ ಆಪರೇಷನ್ಸ್ ಮತ್ತು ಕಡಲ ಭದ್ರತಾ ಸಂಸ್ಥೆ ಅಂಬ್ರೆ ಪ್ರಕಾರ, ಭಾರತದ ಕರಾವಳಿ ಭಾಗದಲ್ಲಿ ಈ ದಾಳಿ ನಡೆದಿದೆ. ಈ ದಾಳಿಯಿಂದ ಹಡುಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿದೆ.
ಇದು ಇಸ್ರೇಲ್‌ನ ಲೈಬೀರಿಯಾ-ಫ್ಲಾಗ್ಡ್ ರಾಸಾಯನಿಕ/ಉತ್ಪನ್ನಗಳ ಟ್ಯಾಂಕರ್ಗಳನ್ನು ಹೊತ್ತೊಯ್ಯುತ್ತಿದ್ದ ಹಡಗು ಎಂದು ಹೇಳಲಾಗಿದೆ.
Advertisement. Scroll to continue reading.
ಇನ್ನು ಈ ದಾಳಿಗೆ ಭಾರತೀಯ ನೌಕಾಪಡೆ ಪ್ರತ್ಯುತ್ತರ ನೀಡುತ್ತಿದೆ ಎಂದು ಹೇಳಲಾಗಿದೆ. ಇನ್ನು ದಾಳಿಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಬಗ್ಗೆ ಇಸ್ರೇಲ್ಗೂ ವರದಿ ಮಾಡಲಾಗಿದೆ.
ಇನ್ನು ಈ ದಾಳಿ ಎಲ್ಲಿಂದ ನಡೆದಿದೆ ? ಯಾರು ನಡೆಸಿದ್ದಾರೆ ಎಂದು ತಿಳಿದು ಬಂದಿಲ್ಲ ಎಂದು ವರದಿ ಹೇಳಿದೆ.
ಭಾರತ ಸರ್ಕಾರ ಹೆಚ್ಚಿನ ಕ್ರಮ ತೆಗೆದುಕೊಳ್ಳುವಂತೆ ನೌಕ ದಳಕ್ಕೆ ತಿಳಿಸಿದೆ.
Advertisement. Scroll to continue reading.