ಬೆಂಗಳೂರು : ಕ್ರಿಕೆಟಿಗ ಕೆ.ಸಿ ಕಾರಿಯಪ್ಪ ಅವರು ಯುವತಿಯೊಬ್ಬರಿಗೆ ನಂಬಿಸಿ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೇ, ಯುವತಿಯ ವಿರುದ್ಧ ಕೆ.ಸಿ ಕಾರಿಯಪ್ಪ ಕೂಡ ಪ್ರತಿ ದೂರು ನೀಡಿದ್ದಾರೆ.
ಯುವತಿ ದೂರು ಏನು ?
ಪೊಲೀಸ್ ಠಾಣೆ ಮೆಟ್ಟಿಲೇರಿರುವ ದಿವ್ಯಾ, ಕಾರಿಯಪ್ಪ ತನ್ನನ್ನು ನಂಬಿಸಿ ಮೋಸ ಮಾಡಿದ್ದಾರೆ. ಪ್ರೀತಿಸಿದ ಬಳಿಕ ಮದುವೆಯಾಗು ಎಂದು ಕೇಳಿದ್ದಕ್ಕೆ ನಿರಾಕರಿಸುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಾನು ಮತ್ತು ಕೆ.ಸಿ ಕಾರಿಯಪ್ಪ ಇನ್‍ಸ್ಟಾದಲ್ಲಿ ಪರಿಚಯವಾಗಿದ್ದು, ಒಂದೇ ಕಮ್ಯೂನಿಟಿ ಹಾಗೂ ಒಂದೇ ಊರಿನವರಾಗಿದ್ದೇವೆ. ಆರಂಭದಲ್ಲಿ ನನಗೆ ಲವರ್ ಇರುವ ಬಗ್ಗೆ ಹೇಳಿದ್ದೆ. ಹೀಗಾಗಿ ಫ್ರೆಂಡ್ ಆಗಿ ಇರುವ ಬಗ್ಗೆ ಮಾತನಾಡಿದೆವು. ಅದಾದ ಬಳಿಕ ನಮ್ಮ ಮನೆಯವರಿಗೆ ಪರಿಚಯ ಮಾಡಲಾಗಿತ್ತು. ನನಗೆ ಮೊದಲ ಲವ್ವರ್ ಗಿಂತ ನಿವೇ ಇಷ್ಟ ಅಂತ ನಂಬಿಸಿ ನನ್ನನ್ನು ದೈಹಿಕವಾಗಿ ಬಳಸಿಕೊಂಡರು. ಹೀಗಾಗಿ ನಾನು ಪ್ರಗ್ನೆಂಟ್ ಆಗಿದ್ದೆ. ಅದನ್ನ ಅಬಾರ್ಷನ್ ಮಾಡಿಸಿಕೊಳ್ಳುವಂತೆ ಹೇಳಿದ್ದ. ಆದರೆ ಅದಕ್ಕೆ ನಾನು ಒಪ್ಪಿಕೊಳ್ಳಲಿಲ್ಲ. ಆದರೂ ಐಪಿಎಲ್ ಇದೆ, ನಂತರ ಮದುವೆ ಆಗೋಣ ಅಂತ ಹೇಳಿ ಅಬಾರ್ಷನ್ ಮಾಡಿಸಿದ ಎಂದು ಆರೋಪಿಸಿದ್ದಾರೆ.
ಒಮ್ಮೆ ಅವರ ಮನೆಯವರ ಭೇಟಿ ಮಾಡಿಸಿ ಬಂದ ಬಳಿಕ ನನಗೆ ಕಾರಿನಲ್ಲಿ ಮಾತ್ರೆ ಕೊಟ್ಟಿದ್ದ. ಒತ್ತಾಯಪೂರ್ವಕವಾಗಿ ನನಗೆ ಮಾತ್ರೆ ಕೊಡಿಸಿದ್ದ. ಮಾತ್ರೆ ಕೊಟ್ಟ ಒಂದು ವಾರದಲ್ಲಿ ಬ್ಲೀಡಿಂಗ್ ಆಗಿದೆ. ಅದನ್ನ ಪ್ರಶ್ನೆ ಮಾಡಿದಾಗ ಡಾಕ್ಟರ್, ಒಂದು ಮಾತ್ರೆಯಿಂದ ಏನೂ ಆಗಲ್ಲ ಅಂತ ನನಗೆ ಹೇಳಿದರು. ನೀನು ವೀಕ್ ಇದ್ದೀಯಾ ಅನ್ನಿಸುತ್ತೆ ಒಂದು ಕೆಟ್ಟ ಕನಸು ಅಂತ ಮರೆತುಬಿಡು ನಾನು ಜವಾಬ್ದಾರನಾಗಿರುತ್ತೇನೆ ಎಂದು ಕಾರಿಯಪ್ಪ ಹೇಳಿದ್ದರು ಅಂತಾ ಯುವತಿ ಗಂಭೀರ ಆರೋಪ ಮಾಡಿದ್ದಾರೆ. ಒಮ್ಮೆ ಹಳೆ ಲವರ್ ಕಾಲ್ ಮಾಡಿದ್ದರು. ಆಗ ನನಗೆ ಮೋಸ ಮಾಡಿರೋ ಬಗ್ಗೆ ಹೇಳಿದರು. ಅದ್ದರಿಂದ ನನಗೆ ವಿಚಾರ ಗೊತ್ತಾಯ್ತು. ನನ್ನ ಮೇಲೆ ಡ್ರಗ್ಸ್ ತೆಗೆದುಕೊಳ್ಳುವ ಆರೋಪ ಕೂಡ ಮಾಡಿದ್ದರು ಎಂದಿದ್ದಾರೆ.
ಮಾಡ್ಲಿಂಗ್ (Modeling) ಮಾಡುವ ವಿಚಾರದ ಬಗ್ಗೆ ಡಾಮಿನೇಟ್ ಮಾಡ್ತಾ ಇದ್ದ. ಒಮ್ಮೆ ಎರಡು ಟೂರ್ನಮೆಂಟ್ ನಲ್ಲಿ ಮಿಸಸ್ ಕಾರ್ಯಪ್ಪ ಅಂತ ಬರೆಸಿ ನನ್ನ ಬೇರೆ ಬೇರೆ ರಾಜ್ಯಕ್ಕೆ ಕರೆದುಕೊಂಡು ಹೋಗಿದ್ದಾನೆ. 22 ಡಿಸೆಂಬರ್ ನಲ್ಲಿ ಅವರ ಮನೆಗೆ ಹೋಗಿದ್ದೆ. ಆಗ ಅವನು, ನಾನು ಐಪಿಎಲ್‍ನಲ್ಲಿ ಅನ್ ಸೋಲ್ಡ್ ಆಗಿದ್ದೀನಿ ಬೇಜಾರಲ್ಲಿ ಇದ್ದೀನಿ ಅಂತ ಕಳಿಸಿಕೊಟ್ಟ. ನನಗೆ ಟಾರ್ಚರ್ ಮಾಡಬೇಡ ಎಂದು ಬೆದರಿಸಿ ಕಳಿಸಿಕೊಟ್ಟ. ಮನೆಗೆ ಹೋಗಿ ಕೂತಿದ್ರೂ ನನಗೆ ರೆಸ್ಪಾನ್ಸ್ ಮಾಡಿಲ್ಲ. ಹಾಗಾಗಿ ಒಂದು ಇನ್‍ಸ್ಟಾ ಮಾರ್ಟ್ ನಲ್ಲಿ ನನ್ನ ಕೈಕಟ್ ಮಾಡಿಕೊಳ್ಳುವುದಕ್ಕೆ ಚಾಕು ತರಿಸಿದ್ದೆ. ಅದನ್ನ ಪೊಲೀಸರಿಗೆ ಹೇಳಿ ದೂರು ಕೊಟ್ಟಿದ್ದಾನೆ. ಬಗಲಗುಂಟೆ ಠಾಣೆಯಲ್ಲಿ ಬೆದರಿಕೆ ಹಾಕುತ್ತಿದ್ದಾಳೆಂದು ದೂರು ಕೊಟ್ಟಿದ್ದಾನೆ ಎಂದು ಯುವತಿ ತಿಳಿಸಿದ್ದಾರೆ.
ಕೆ.ಸಿ ಕಾರ್ಯಪ್ಪ ಕೂಡ ವೀಡ್ ತೆಗೆದುಕೊಳ್ತಾನೆ. ಮನೆಯಲ್ಲಿ ಡ್ರಗ್ಸ್ ಮಾಡುತ್ತಾರೆ. ನಾನು ಪಾರ್ಟಿಗೆ ಹೋದಾಗ ಬಿಯರ್ ಕುಡಿತೀನಿ, ಅದನ್ನ ಬಿಟ್ಟು ಡ್ರಗ್ಸ್ ತೆಗೆದುಕೊಳ್ಳಲ್ಲ. ನಾನು ಮೆಡಿಕಲ್ ಟೆಸ್ಟ್ ಗೆ ರೆಡಿ ಇದ್ದೇನೆ ಎಂದು ಯುವತಿ ತಿಳಿಸಿದ್ದಾರೆ. ಮುಸ್ಲಿಂ ಬಾಯ್ ಅನ್ನು ಮದುವೆ ಆಗಿದ್ದೆ, ಆದರೆ ನನಗೆ ಡಿವೋರ್ಸ್ ಆಯ್ತು. ಕಾರಣ ನನಗೆ ಕನ್ವರ್ಟ್ ಆಗೋದಕ್ಕೆ ಒತ್ತಾಯ ಮಾಡಿದ್ದರು, ನಾನು ಅದಕ್ಕೆ ನಿರಾಕರಿಸಿದ್ದೆ. ಬಳಿಕ ನನಗೆ ನನ್ನ ಮೊದಲ ಮದುವೆ ಕಾನೂನಿನ ಪ್ರಕಾರ ಡಿವೋರ್ಸ್ ಆಯ್ತು. ಹೀಗೆಲ್ಲ ಆಗಿದೆ ನಾನು ನೋಡಿಕೊಳ್ತೀನಿ ಅಂದಿದ್ದ. ಹಳೆ ಲವರ್ ಸಿಕ್ಕಾಪಟ್ಟೆ ಆರೋಪ ಮಾಡಿದ್ದರು. ಕಾರಿಯಪ್ಪ ಅವರ ದೊಡ್ಡ ಮಟ್ಟದಲ್ಲಿ ಲೋನ್ಸ್ ಇದೆ. ಫೋನ್ ಪಿಕ್ ಮಾಡಲ್ಲ ಅವನು ಅಂತೆಲ್ಲ ಅವರು ಹೇಳಿದ್ದರು ಎಂದಿದ್ದಾರೆ.
ಕಾರಿಯಪ್ಪ ಏನಂತಾರೆ?
ಮಾಜಿ ಪ್ರೇಯಸಿಯ ದೂರಿಗೆ ಪ್ರತಿ ದೂರನ್ನು ಕ್ರಿಕೆಟಿಗ ಕೆ.ಸಿ ಕಾರಿಯಪ್ಪ ದಾಖಲಿಸಿದ್ದಾರೆ. ಅಲ್ಲದೇ ಯುವತಿಯ ವೀಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ. ಜೊತೆಗೆ ಯುವತಿಯ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿರುವಂತ ಕ್ರಿಕೆಟಿಗ ಕೆ.ಸಿ ಕಾರಿಯಪ್ಪ, ನಾನು ಇಲ್ಲದ ಸಂದರ್ಭದಲ್ಲಿ ಯುವತಿ ಮನೆಗೆ ತೆರಳಿ ತಂದೆ-ತಾಯಿಗೆ ಬೆದರಿಕೆ ಹಾಕುತ್ತಿದ್ದರು. ಚಾಕುವಿನಿಂದ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೆದರಿಸಿದ್ದಾರೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನನ್ನ ರಕ್ಷಣೆಗಾಗಿ ದೂರು ನೀಡಿದ್ದೇನೆ ಎಂದಿದ್ದಾರೆ.
ನನಗೆ ಯುವತಿ ಕಳೆದ ಒಂದೂವರೆ ವರ್ಷದ ಹಿಂದೆ ಇನ್ಸ್ಟಾ ಗ್ರಾಂನಲ್ಲಿ ಪರಿಚಯವಾದರು. ನಮ್ಮೂರಿನವರೇ ಎನ್ನುವ ಕಾರಣಕ್ಕೆ ನಾವಿಬ್ಬರೂ ಆತ್ಮೀಯರಾದೆವು. ಆ ಬಳಿಕ ಪ್ರೀತಿಸಿದ್ವಿ. ಆಗಲೇ ನನಗೆ ಗೊತ್ತಾಗಿದ್ದು ಈಕೆಗೆ ಈಗಾಗಲೇ ಮದುವೆಯಾಗಿದೆ. ಮುಸ್ಲಿಂ ಯುವಕನನ್ನು ಮದುವೆಯಾಗಿ ಆತನಿಂದ ದೂರಾಗಿದ್ದಾಳೆ. ಆ ಯುವಕ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ನಾನು ಆಕೆಯ ಟಾರ್ಚರ್ ತಡೆಯೋದಕ್ಕೆ ಆಗದೇ ಮೊದಲು ದೂರು ನೀಡಿದ್ದೇನೆ. ನನ್ನ ದೂರಿನ ಬಳಿಕ ಆಕೆ ದೂರು ನೀಡಿದ್ದಾರೆ. ಆಕೆ ಡ್ರಗ್ಸ್ ಅಡಿಕ್ಟ್ ಆಗಿದ್ದಾಳೆ. ವಿಚಿತ್ರವಾಗಿ ವರ್ತಿಸುತ್ತಾಳೆ ಎಂದು ಕ್ರಿಕೆಟಿಗ ಕೆ.ಸಿ ಕಾರಿಯಪ್ಪ ಆರೋಪಿಸಿದ್ದಾರೆ.