ಹಿರಿಯಡಕ : ಕಾಜಾರಗುತ್ತು ಸ.ಹಿ.ಪ್ರಾ. ಶಾಲೆಯಲ್ಲಿ ಫೆ.7 ರಂದು ಉಚಿತ ಕಣ್ಣಿನ ಮತ್ತು ಬಿ.ಪಿ, ಶುಗರ್ ತಪಾಸಣಾ ಶಿಬಿರ
Published
0
ಹಿರಿಯಡಕ : ಕಾಜಾರಗುತ್ತು ಗೆಳೆಯರ ಬಳಗ ಮತ್ತು ಕಾಜಾರಗುತ್ತು ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ, ಪೆರ್ಣಂಕಿಲ ಪ್ರಾಥಮಿಕ ಆರೋಗ್ಯ ಕೇಂದ್ರ, ಉಡುಪಿ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಅಂಧತ್ವ ನಿವಾರಣಾ ವಿಭಾಗ ಉಡುಪಿ ಸಹಯೋಗದೊಂದಿಗೆ ಉಚಿತ ನೇತ್ರ ಮತ್ತು ಬಿ.ಪಿ ಶುಗರ್ ತಪಾಸಣಾ ಶಿಬಿರ ಫೆ.7 ರಂದು(ಭಾನುವಾರ) ಕಾಜಾರಗುತ್ತು ಸ.ಹಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ. ಬೆಳಿಗ್ಗೆ 9 ರಿಂದ ಮಧ್ಯಾಹ್ನ 12.30 ರ ವರೆಗೆ ಶಿಬಿರ ನಡೆಯಲಿದೆ. ಉಚಿತ ಕಣ್ಣಿನ ಮತ್ತು ಬಿ.ಪಿ, ಶುಗರ್ ತಪಾಸಣೆ ನಡೆಯಲಿದ್ದು, ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಆದವರಿಗೆ ನಿಗದಿ ಪಡಿಸಿದ ದಿನದಂದು ಉಡುಪಿಯ ಪ್ರಸಾದ್ ನೇತ್ರಾಲಯ ತಂಡವು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿ, ಉಚಿತ ಶಸ್ತ್ರ ಚಿಕಿತ್ಸೆ ಮಾಡಿಸಿ, ಮಾರನೇದಿನ ವಾಪಾಸು ಕರೆ ತರುವ ವ್ಯವಸ್ಥೆ ಇದೆ. ಅತೀ ರಿಯಾಯಿತಿ ದರದಲ್ಲಿ ಕನ್ನಡಕ ವಿತರಿಸಲಾಗುವುದು. ಮಣಿಪಾಲ್ ಕಾರ್ಡ್ ಮತ್ತು ಜಿ.ಶಂಕರ್ ಕಾರ್ಡ್ ಹೊರತು ಪಡಿಸಿ ಇತರೆ ಆರೋಗ್ಯ ಕಾರ್ಡ್ ಮೂಲಕ ಸೌಲಭ್ಯ ಪಡೆಯಬಹುದು.