ಇಸ್ಲಾಮಾಬಾದ್ : ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಉಗ್ರರು ವಿದೇಶಿ ನೆಲದಲ್ಲಿ ಅಪರಿಚಿತರ ದಾಳಿಗೆ ಹತ್ಯೆಯಾಗುತ್ತಿರುವ ಸುದ್ದಿ ಇತ್ತೀಚೆಗೆ ಹೆಚ್ಚಾಗಿದೆ.
ಇಸ್ಲಾಮಾಬಾದ್‌ನಲ್ಲಿ ಭಾರತ ವಿರೋಧಿ ಹೇಳಿಕೆ ಮೂಲಕ ಪ್ರಚೋದನೆ ನೀಡುತ್ತಿದ್ದ ಇಸ್ಲಾಮ್ ಮೂಲಭೂತವಾದಿ, ಸುನ್ನಿ ಉಲೆಮಾ ಕೌನ್ಸಿಲ್ ನಾಯಕ ಮೌಲನಾ ಮಸೂದ್ ಉರ್ ರೆಹಮಾನ್ ಉಸ್ಮಾನಿ ಹತ್ಯೆಯಾಗಿದ್ದಾನೆ.
ವರದಿಗಳ ಪ್ರಕಾರ, ಆಗುಂತಕರು ದ್ವಿಚಕ್ರವಾಹನದಲ್ಲಿ ಬಂದಿದ್ದು ಇಸ್ಲಾಮಾಬಾದ್‌ನ ಗೌರಿ ಪಟ್ಟಣದ ಕಡೆ ಡ್ರೈವರ್ ಜೊತೆ ಕಾರಿನಲ್ಲಿ ತೆರಳುತ್ತಿದ್ದ ಉಸ್ಮಾನಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಸತತ ಗುಂಡಿನ ದಾಳಿ ಮೂಲಕ ಉಸ್ಮಾನಿಯನ್ನು ಹತ್ಯೆ ಮಾಡಲಾಗಿದೆ. ಇದಾದ ನಂತರ ಉಸ್ಮಾನಿಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.
Advertisement. Scroll to continue reading.
ಈ ದಾಳಿಯ ಹೊಣೆಯನ್ನು ಇನ್ನೂ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.
ಮೌಲಾನಾ ಉಸ್ಮಾನಿ ಭಾರತದ ವಿರುದ್ಧ ಕಿಡಿಕಾರುತ್ತಿದ್ದನು. ಆತ ಉದ್ರೇಕಕಾರಿ ಭಾಷಣಗಳಿಗೆ ಹೆಸರುವಾಸಿಯಾಗಿದ್ದ.
ಇನ್ನಿ, ಭಾರತಕ್ಕೆ ಬೇಕಾದ ಉಗ್ರರು ವಿದೇಶಿ ನೆಲದಲ್ಲಿ ಹತ್ಯೆಗೀಡಾಗುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ 26/11 ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್‌ನ ಆಪ್ತ, ಲಷ್ಕರ್-ಎ-ತೊಯ್ಬಾಉಗ್ರ ಹನ್‌ಜ್ಲಾ ಅದ್ನಾನ್ ಪಾಕಿಸ್ತಾನದ ಕರಾಚಿಯಲ್ಲಿ ಅನಾಮಧೇಯ ದಾಳಿಕೋರರ ಗುಂಡಿಗೆ ಬಲಿಯಾಗಿದ್ದ. ಈತ 2015ರಲ್ಲಿ ಜಮ್ಮು-ಕಾಶ್ಮೀರದ ಉಧಮ್‌ಪುರದಲ್ಲಿ ಬಿಎಸ್‌ಎಫ್ ಯೋಧರ ವಾಹನದ ಮೇಲೆ ನಡೆದಿದ್ದ ಭಯೋತ್ಪಾದಕ ದಾಳಿಯ ಮಾಸ್ಟರ್‌ಮೈಂಡ್ ಆಗಿದ್ದ. ಈತನ ಹತ್ಯೆಯೊಂದಿಗೆ ಇತ್ತೀಚಿನ ತಿಂಗಳಲ್ಲಿ ದೇಶ- ವಿದೇಶಗಳಲ್ಲಿ ನಿಗೂಢವಾಗಿ ಸಾವನ್ನಪ್ಪಿದ, ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.
Advertisement. Scroll to continue reading.