ಕುಂದಾಪುರ : ಕಪಾಟಿನಲ್ಲಿ ಇಟ್ಟಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವುಗೈದಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ. ಕರ್ಕುಂಜೆ ಶರತ್ ಎಂಬವರ ಮನೆಯಲ್ಲಿ ಕಳವು ಪ್ರಕರಣ ನಡೆದಿದ್ದು, ಅವರ ತಾಯಿ ಡಿಸೆಂಬರ್ 2 ರಂದು ತಾನು ಧರಿಸುತ್ತಿದ್ದ ಚಿನ್ನದ ಸರ, ಚಿನ್ನದ ಉಂಗುರವನ್ನು ಒಂದು ಬಾಕ್ಸ್ನಲ್ಲಿ ಹಾಕಿ ಮನೆಯ ಕಪಾಟಿನಲ್ಲಿ ಇಟ್ಟಿದ್ದರು. ಬಳಿಕ ಕಪಾಟಿಗೆ ಬೀಗ ಹಾಕಿ ಕೀಯನ್ನು ತಲೆದಿಂಬನ್ನು ಕೆಳಗೆ ಇಟ್ಟಿದ್ದರು.
ಜನವರಿ 7 ರಂದು ಬೆಳಿಗ್ಗೆ ಕಾರ್ಯಕ್ರಮಕ್ಕೆ ಹೋಗುವ ಸಲುವಾಗಿ ಕಪಾಟಿನಲ್ಲಿ ಇಟ್ಟಿದ್ದ ಚಿನ್ನವನ್ನು ಧರಿಸಲು ಹೋದಾಗ ಕಪಾಟಿನಲ್ಲಿ ಇಟ್ಟಿದ್ದ ಬಾಕ್ಸ್ ಹಾಗೂ ಚಿನ್ನಾಭರಣ ಇರಲಿಲ್ಲ.
Advertisement. Scroll to continue reading.
ಶರತ್ ಅವರ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ವಿ.ಸಿ.ಯೋಗೀಶ್ ಎಂಬಾತ ಜನವರಿ 5 ರಂದು ಸಂಜೆ ಮನೆಯಿಂದ ಹೋದವನು ಈ ವರೆಗೂ ಕೆಲಸಕ್ಕೆ ಬಂದಿಲ್ಲ. ಮೊಬೈಲ್ ಸ್ವಿಚ್ ಅಫ್ ಮಾಡಿಕೊಂಡಿದ್ದಾನೆ.
ಹೀಗಾಗಿ ಆತನೇ ಸುಮಾರು 1,80, 000 ರೂ. ಮೌಲ್ಯದ ಚಿನ್ನಾಭರಣವನ್ನು ಕಳವುಗೈದಿರುವ ಬಗ್ಗೆ ಅನುಮಾನವಿದೆ ಎಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.