ವಿವಾದದ ಸುಳಿಯಲ್ಲಿ ‘ಅನ್ನಪೂರ್ಣಿ’: ನೆಟ್‌ಫ್ಲಿಕ್ಸ್‌ನಿಂದ ಔಟ್
Published
0
ಮುಂಬೈ: ಇತ್ತೀಚೆಗಷ್ಟೇ ಬಿಡುಗಡೆಯಾದ ಅನ್ನಪೂರ್ಣಿ ಸಿನಿಮಾಕ್ಕೆ ಸಂಕಷ್ಟ ಎದುರಾಗಿದೆ, ಚಿತ್ರದಲ್ಲಿನ ಕೆಲವು ದೃಶ್ಯಗಳು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆರೋಪಿಸಿ ಸಂಘಟನೆಗಳು ನಟಿ ನಯನತಾರಾ ಮತ್ತು ಚಿತ್ರಕ್ಕೆ ಸಂಬಂಧಿಸಿದ ಇತರರ ವಿರುದ್ಧ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಚಿತ್ರದಲ್ಲಿ ರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಲಾಗಿದ್ದು, ಲವ್ ಜಿಹಾದ್ ಅನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಲಾಗಿದೆ.
‘ಅನ್ನಪೂರ್ಣಿ’ ಸಿನಿಮಾ ಇತ್ತೀಚೆಗಷ್ಟೇ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಅಲ್ಲದೇ, ನೆಟ್‌ಫ್ಲಿಕ್ಸ್ ಇಂಡಿಯಾ ಚಿತ್ರವನ್ನು OTT ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಿದೆ.
Advertisement. Scroll to continue reading.
ಹಿಂದೂ ಸೇವಾ ಪರಿಷದ್ ಜಬಲ್ಪುರದ ಓಮ್ತಿ ಪೊಲೀಸ್ ಸ್ಟೇಷನ್‌ನಲ್ಲಿ ಎಫ್‌ಐಆರ್ ದಾಖಲು ಮಾಡಿದೆ. ಇದರಲ್ಲಿ ನಯನತಾರಾ ಮಾತ್ರವಲ್ಲದೆ, ನಿರ್ದೇಶಕ ನೀಲೇಶ್ ಕೃಷ್ಣ, ನಿರ್ಮಾಪಕರಾದ ಜತಿನ ಸೇಥಿ ಮತ್ತು ಆರ್ ರವೀಂದ್ರನ್ ಹಾಗೂ ನೆಟ್‌ಫ್ಲಿಕ್ಸ್ ಇಂಡಿಯಾದ ಕಂಟೆಂಟ್ ಹೆಡ್ ಮೋನಿಕಾ ಶೇರ್ಗಿಲ್ ಅವರ ಹೆಸರನ್ನು ಎಫ್‌ಐಆರ್‌ನಲ್ಲಿ ದಾಖಲು ಮಾಡಲಾಗಿದೆ.
ಏನು ವಿವಾದ ?
ಅನ್ನಪೂರ್ಣಿ’ ಸಿನಿಮಾದಲ್ಲಿ ನಾಯಕಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿರುತ್ತಾಳೆ. ಆಕೆ ನಮಾಜ್ ಮಾಡಿ, ನಾನ್‌ವೆಜ್ ಅಡುಗೆ ಮಾಡುವುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಇದು ಲವ್ ಜಿಹಾದ್ ಅನ್ನು ಪ್ರೋತ್ಸಾಹಿಸುವಂತಿದೆ.
ಅಲ್ಲದೇ, ಈ ಸಿನಿಮಾದ ಹೀರೋ ಮುಸ್ಲಿಂ ಸಮುದಾಯದವನಾಗಿದ್ದು, ಒಂದು ದೃಶ್ಯದಲ್ಲಿ ಶ್ರೀರಾಮನು ಪ್ರಾಣಿ ಬೇಟೆಯಾಡಿ, ಅದರ ಮಾಂಸವನ್ನು ಸೇವನೆ ಮಾಡುತ್ತಿದ್ದನು ಎಂದು ಆತ ಉಲ್ಲೇಖಿಸುತ್ತಾನೆ. ಇದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ ಎಂಬ ಆರೋಪ ಕೇಳಿಬಂದಿತ್ತು.