ರಾಷ್ಟ್ರೀಯ

ಜಮ್ಮು- ಕಾಶ್ಮೀರ: ಸೇನಾ ವಾಹನಗಳ ಮೇಲೆ ಶಂಕಿತ ಭಯೋತ್ಪಾದಕರಿಂದ ದಾಳಿ

0

ಶ್ರೀನಗರ: ಜಮ್ಮು- ಕಾಶ್ಮೀರದಲ್ಲಿ ಶಂಕಿತ ಉಗ್ರರು ಸೇನಾ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಗೆ ಸೇನಾ ಪಡೆಗಳು ಪ್ರತಿಯಾಗಿ ಶೋಧ ಕಾರ್ಯಾಚರಣೆಯನ್ನು ಕೈಗೊಂಡಿವೆ ಎಂದು ವರದಿಯಾಗಿದೆ.

ಘಟನೆಯಿಂದ ಯಾವುದೇ ಭದ್ರತಾ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. 

‘ಇಂದು 6 ಗಂಟೆ ಸುಮಾರಿಗೆ, ಪೂಂಚ್ ಸೆಕ್ಟರ್‌ನ ಕೃಷ್ಣ ಘಾಟಿ ಬಳಿಯ ಕಾಡಿನಲ್ಲಿ ಶಂಕಿತ ಭಯೋತ್ಪಾದಕರು ಭದ್ರತಾ ಪಡೆಗಳ ವಾಹನಗಳ ಮೇಲೆ ಗುಂಡು ಹಾರಿಸಿದ್ದಾರೆ.

Advertisement. Scroll to continue reading.

ಸೇನಾ ಪಡೆಗಳಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ. ಭಾರತೀಯ ಸೇನೆ ಮತ್ತು ಜೆಕೆಪಿ (ಜಮ್ಮು ಮತ್ತು ಕಾಶ್ಮೀರ ಪೊಲೀಸ್) ಜಂಟಿ ಶೋಧ ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ ಎಂದು ಸೇನೆ ತಿಳಿಸಿದೆ.

ದಾಳಿಗೆ ಒಳಗಾದ ವಾಹನಗಳು ಭದ್ರತಾ ಸಿಬ್ಬಂದಿಯನ್ನು ಮರಳಿ ಶಿಬಿರಕ್ಕೆ ಕರೆದೊಯ್ಯುತ್ತಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com